ಆಹಾರದ ಕೊರತೆಯಿಂದ ಮದುವೆ ರದ್ದು; ಪೊಲೀಸ್ ಠಾಣೆಯಲ್ಲಿ ʼಸುಖಾಂತ್ಯʼ

ಗುಜರಾತ್‌ನ ಸೂರತ್‌ನಲ್ಲಿ ವಿವಾಹ ಸಮಾರಂಭವೊಂದು ವಿಚಿತ್ರ ರೀತಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೆರವೇರಿದ ಘಟನೆ ವರದಿಯಾಗಿದೆ. ವರನ ಕಡೆಯವರು ಊಟದ ಕೊರತೆಯ ನೆಪವೊಡ್ಡಿ ಮದುವೆಯನ್ನು ರದ್ದುಗೊಳಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಯಿತು.

ವರ ಮತ್ತು ವಧು ಇಬ್ಬರೂ ಬಿಹಾರ ಮೂಲದವರಾಗಿದ್ದಾರೆ. ರಾಹುಲ್ ಪ್ರಮೋದ್ ಮಹ್ತೋ ಮತ್ತು ಅಂಜಲಿ ಕುಮಾರಿ ಅವರ ವಿವಾಹವು ಲಕ್ಷ್ಮೀ ಹಾಲ್‌ನಲ್ಲಿ ನಡೆಯಬೇಕಿತ್ತು. ವರದಿಗಳ ಪ್ರಕಾರ, ಈ ಜೋಡಿ ಹೆಚ್ಚಿನ ವಿಧಿಗಳನ್ನು ಪೂರ್ಣಗೊಳಿಸಿದ್ದರು, ಈ ಸಂದರ್ಭದಲ್ಲಿ ಮಹ್ತೋ ಅವರ ಕುಟುಂಬವು ಅತಿಥಿಗಳಿಗೆ ಬಡಿಸುವ ಆಹಾರದ ಕೊರತೆಯ ಬಗ್ಗೆ ಗಲಾಟೆ ಆರಂಭಿಸಿದೆ.

ಮಹ್ತೋ ಅವರ ಕುಟುಂಬದ ವರ್ತನೆಯಿಂದ ಬೇಸತ್ತ ಕುಮಾರಿ ಕುಟುಂಬವು ಪೊಲೀಸರನ್ನು ಸಂಪರ್ಕಿಸಿದ್ದು, “ಹೆಚ್ಚಿನ ವಿಧಿಗಳು ಪೂರ್ಣಗೊಂಡಿದ್ದವು. ಕೇವಲ ವರಮಾಲೆ ಬದಲಾವಣೆ ಮಾತ್ರ ಬಾಕಿ ಇತ್ತು. ಆಹಾರದ ಕೊರತೆಯ ಬಗ್ಗೆ ಎರಡೂ ಕುಟುಂಬಗಳು ವಾಗ್ವಾದ ನಡೆಸಿ ನಂತರ ವರನ ಕಡೆಯವರು ಮದುವೆಯನ್ನು ಮುಂದುವರಿಸಲು ನಿರಾಕರಿಸಿದ್ದರು” ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ) ಅಲೋಕ್ ಕುಮಾರ್ ಹೇಳಿದ್ದಾರೆ.

ಮಹ್ತೋ ತನ್ನನ್ನು ಮದುವೆಯಾಗಲು ಸಿದ್ಧನಿದ್ದರೂ ಅವನ ಕುಟುಂಬವು ಒಪ್ಪಲಿಲ್ಲ ಎಂದು ಕುಮಾರಿ ಪೊಲೀಸರಿಗೆ ತಿಳಿಸಿದ್ದು, ವರನ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆಯಲಾಯಿತು. ಪೊಲೀಸರ ಮಧ್ಯಸ್ಥಿಕೆಯ ನಂತರ, ವರನ ಕುಟುಂಬವು ಮದುವೆಯನ್ನು ಮುಂದುವರಿಸಲು ಒಪ್ಪಿಕೊಂಡಿತು.

ಕುಮಾರಿ, ಎರಡೂ ಕುಟುಂಬಗಳು ಮದುವೆಯ ಮಂಟಪಕ್ಕೆ ಹಿಂತಿರುಗಿದರೆ ಜಗಳವಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ ನಂತರ, ಪೊಲೀಸರು ಪೊಲೀಸ್ ಠಾಣೆಯಲ್ಲಿಯೇ ವಿಧಿಗಳನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read