ʼಅಂತ್ಯಸಂಸ್ಕಾರʼ ನೆರವೇರಿಸಿದ ಕುಟುಂಬ; ಪ್ರಾರ್ಥನಾ ಸಭೆ ವೇಳೆ ಸತ್ತಿದ್ದಾನೆಂದುಕೊಂಡವನು ಜೀವಂತ ಪ್ರತ್ಯಕ್ಷ…!

ತಮ್ಮ ಪುತ್ರ ನಾಪತ್ತೆಯಾಗಿದ್ದಾನೆಂದು ಕುಟುಂಬವೊಂದು ಪೊಲೀಸರಲ್ಲಿ ದೂರು ದಾಖಲಿಸಿದ್ದು, ನಾಪತ್ತೆಯಾದ ವ್ಯಕ್ತಿಯ ಕುಟುಂಬ ಸದಸ್ಯರು ನೀಡಿದ್ದ ಚಹರೆಯಂತೆಯೇ ಶವವೊಂದು ನದಿಯಲ್ಲಿ ದೊರಕಿದ್ದು, ಆತನ ಕುಟುಂಬ ಸದಸ್ಯರು ಸಹ ಅದೇ ವ್ಯಕ್ತಿಯೆಂದು ಗುರುತಿಸಿದ್ದರು.

ಇದರ ಆಧಾರದ ಮೇಲೆ ಆ ಶವವನ್ನು ಕುಟುಂಬ ಸದಸ್ಯರಿಗೆ ಪೊಲೀಸರು ಹಸ್ತಾಂತರಿಸಿದ್ದು, ಅವರು ಅಂತ್ಯಕ್ರಿಯೆಯನ್ನೂ ಸಹ ನೆರವೇರಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಮೃತನ ಗೌರವಾರ್ಥ ಪ್ರಾರ್ಥನಾ ಸಭೆ ನಡೆಸುವಾಗ ಸತ್ತಿದ್ದಾನೆಂದುಕೊಂಡ ವ್ಯಕ್ತಿ ಜೀವಂತವಾಗಿ ಪ್ರತ್ಯಕ್ಷನಾಗಿದ್ದಾನೆ. ಆತನನ್ನು ಕಂಡು ಕುಟುಂಬ ಮೊದಲು ಹೌಹಾರಿದರೂ ನಂತರ ಸಂತಸಗೊಂಡಿದೆ. ಇಂತಹದೊಂದು ಘಟನೆ ಗುಜರಾತಿನ ಅಹ್ಮದಾಬಾದ್‌ ನಲ್ಲಿ ನಡೆದಿದೆ.

ಅಕ್ಟೋಬರ್ 27ರಂದು 43 ವರ್ಷದ ಬ್ರಿಜೇಶ್ ಸುತಾರ್ ನಾಪತ್ತೆಯಾಗಿದ್ದು, ಕುಟುಂಬದ ಪುನರಾವರ್ತಿತ ವಿನಂತಿಗಳ ನಂತರ ಪೊಲೀಸರು ಗುರುತಿಸಲಾಗದ ಪ್ರಕರಣವನ್ನು ದಾಖಲಿಸಿದ್ದರು. ನವೆಂಬರ್ 10 ರಂದು ಸಬರಮತಿ ನದಿಯಲ್ಲಿ ಪತ್ತೆಯಾದ ಊದಿಕೊಂಡ ಶವವನ್ನು ಗುರುತಿಸಲು ಕುಟುಂಬ ಸದಸ್ಯರಿಗೆ ಕರೆ ಬಂದಿದ್ದು, ಸಂಬಂಧಿಕರು ಬಂದು ಬ್ರಿಜೇಶ್ ಸುತಾರ್  ಎಂದು ಗುರುತಿಸಿದ್ದರು.

ಕುಟುಂಬ ಸದಸ್ಯರು ಶವವನ್ನು ಅಂತಿಮ ವಿಧಿಗಳಿಗಾಗಿ ಮೆಹ್ಸಾನಾದ ವಿಜಾಪುರದಲ್ಲಿರುವ ತಮ್ಮ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದು ಮತ್ತು ನವೆಂಬರ್ 14 ರಂದು ಸಂತಾಪ ಸಭೆಯನ್ನು ನಡೆಸಿದ್ದರು. ಒಂದು ದಿನದ ನಂತರ, ಸುತಾರ್ ಜೀವಂತವಾಗಿ ಕಾಣಿಸಿಕೊಂಡಿದ್ದು, ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ದಿಗ್ಭ್ರಮೆಗೊಂಡರು. ಬಳಿಕ ತಮ್ಮ ಪುತ್ರ ಜೀವಂತವಾಗಿರುವುದನ್ನು ಕಂಡು ಕುಟುಂಬ ಸಂತಸಗೊಂಡಿದೆ.

ಷೇರು ಮಾರುಕಟ್ಟೆಯಲ್ಲಿ ಆದ ಭಾರಿ ನಷ್ಟದಿಂದಾಗಿ ಒತ್ತಡದಿಂದ ಸುತಾರ್ ಯಾರಿಗೂ ಹೇಳದೆ ಮನೆಯಿಂದ ಹೋಗಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದರು. ಆತನನ್ನು ಸಂಪರ್ಕಿಸಲು ವಿಫಲವಾದ ಎರಡು ದಿನಗಳ ನಂತರ, ಸುತಾರ್ ಅವರ ಸೋದರಳಿಯ ಮತ್ತು ಸೋದರ ಮಾವ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಕಾಣೆಯಾದ ದೂರು ದಾಖಲಿಸಿದ್ದರು. ಈಗ ಯಾರ ಶವವನ್ನು ದಹನ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read