ಮದುವೆ ಶಾಸ್ತ್ರ ನಡೆಯುತ್ತಿದ್ದಾಗಲೇ ವಧುವಿಗೆ ಹೃದಯಾಘಾತ; ಅಂತ್ಯಕ್ರಿಯೆಗೂ ಮುನ್ನ ಆಕೆಯ ಸಹೋದರಿಯೊಂದಿಗೆ ವರನ ವಿವಾಹ

ಹೊಸ ಬಾಳಿಗೆ ಕಾಲಿಡಲು ಸಡಗರದಿಂದ ಸಿದ್ದಳಾಗಿದ್ದ ವಧು ಮದುವೆ ಶಾಸ್ತ್ರ ನಡೆಯುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಸಂಭ್ರಮದಿಂದ ಕೂಡಿದ್ದ ಮದುವೆ ಮನೆ ಕ್ಷಣಾರ್ಧದಲ್ಲಿ ಮಸಣವಾಗಿದ್ದು, ಆದರೆ ಹಿರಿಯರ ಸಲಹೆಯಂತೆ ವರನ ವಿವಾಹವನ್ನು ಮೃತ ವಧುವಿನ ಸಹೋದರಿಯೊಂದಿಗೆ ನೆರವೇರಿಸಲಾಗಿದೆ.

ಇಂತಹದೊಂದು ಘಟನೆ ಗುಜರಾತಿನ ಭಾವನಗರದಲ್ಲಿ ನಡೆದಿದ್ದು, ಜಿನಾ ಭಾಯ್ ರಾಥೋಡ್ ಎಂಬವರ ಪುತ್ರಿ ಹೇಟೆಲ್ ವಿವಾಹವನ್ನು ರಾಣಾಭಾಯ್ ಬುಟ್ಟಾ ಬಾಯ್ ಎಂಬವರ ಪುತ್ರ ವಿಶಾಲ್ ಜೊತೆಗೆ ನಿಗದಿಯಾಗಿತ್ತು.

ಎರಡು ಕಡೆಯ ಕುಟುಂಬಸ್ಥರು ಮದುವೆಯ ಶಾಸ್ತ್ರ ನಡೆಸುತ್ತಿದ್ದಾಗ ವಧುವಿಗೆ ಹೃದಯಘಾತವಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ಇದರ ಮಧ್ಯೆ ವಿವಾಹವನ್ನು ನಿಲ್ಲಿಸಬಾರದೆಂಬ ತೀರ್ಮಾನ ಕೈಗೊಂಡ ಹಿರಿಯರು ಪ್ರಸ್ತಾವನೆ ಒಂದನ್ನು ಮುಂದಿರಿಸಿದ್ದಾರೆ.

ವಧುವಿನ ಸಹೋದರಿ ಜೊತೆ ವಿಶಾಲ್ ಮದುವೆ ನೆರವೇರಿಸಬೇಕೆಂದು ನಿಶ್ಚಯಿಸಿದ್ದು, ಅದರಂತೆ ನಿಗದಿತ ಮುಹೂರ್ತದಲ್ಲಿಯೇ ಈ ಮದುವೆ ನಡೆದಿದೆ. ಅಲ್ಲಿಯವರೆಗೂ ಮೃತ ಹೇಟೆಲ್ ಶವವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸಿದ್ದು, ಮದುವೆ ಶಾಸ್ತ್ರ ಪೂರ್ಣಗೊಂಡ ಬಳಿಕ ಉಭಯ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read