ಅಸ್ಸಾಂ: ದೇಶದ ಜನತೆಗೆ ನವರಾತ್ರಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಲಾಗಿದೆ. ಜಿಎಸ್ ಟಿ ಪ್ರಮಾಣದಲ್ಲಿ ಸಾಕಷ್ಟು ಕಡಿತ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಸ್ಸಾಂನ ದರ್ಯಾಂಗ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಿಎಸ್ ಟಿ ಕಡಿತದ ಸಿಹಿಸುದ್ದಿಯೊಂದಿಗೆ ಬಂದಿದ್ದೇನೆ. ನವರಾತ್ರಿ ಆರಂಭಕ್ಕೂ ಒಂದು ದಿನ ಮುನ್ನ ಜಿಎಸ್ ಟಿ ಕಡಿತವಾಗಲಿದೆ. ಕಾರು, ಬೈಕ್, ಮಾತ್ರೆಗಳು ಹಾಗೂ ಅಗತ್ಯ ವಸ್ತುಗಳ ದರ ಕಡಿಮೆಯಾಗಲಿದೆ ಎಂದರು.
ಇದೇ ವೇಳೆ ಜನರು ಹೆಚ್ಚು ದೇಶಿ ನಿರ್ಮಿತ ವಸ್ತುಗಳನ್ನು ಖರೀದಿಸಬೇಕು. ಭಾರತದಲ್ಲಿ ತಯಾರಿಸಲ್ಪಟ್ಟ ವಸ್ತುಗಳನ್ನು ಖರೀದಿ ಮಾಡುವಂತೆ ಕರೆ ನೀಡಿದರು.
ದೇಶದ ಅಭಿವೃದ್ಧಿಯಲ್ಲಿ ಅಸ್ಸಾಂ ಪಾತ್ರ ಮಹತ್ವದ್ದಾಗಿದೆ. ಕಾಂಗ್ರೆಸ್ ಅಹಂಕಾರಿ ಪಕ್ಷವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಈಶಾನ್ಯರಾಜ್ಯಗಳನ್ನು ಕಡೆಗಣಿಸಿತು. ಕಾಂಗ್ರೆಸ್ ನ 60 ವರ್ಷಗಳ ಆಡಳಿತದಲ್ಲಿ ಕೇವಲ 3 ಬ್ರಿಡ್ಜ್ ಗಳನ್ನು ಮಾತ್ರ ನಿರ್ಮಿಸಲಾಗಿದೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕೇವಲ ಮೂರು ಸೇತುವೆಗಳನ್ನು ನಿರ್ಮಿಸಲಾಗಿದೆ. ಎನ್ ಡಿಎ ಆಡಲಿತದ 10 ವರ್ಷಗಳ ಅವಧಿಯಲ್ಲಿ 6 ಸೇತುವೆಗಳನ್ನು ನಿರ್ಮಿಸಲಾಗಿದೆ. ಇದು ಡಬಲ್ ಇಂಜಿನ್ ಸರ್ಕಾರ. ದೇಶದ ಅಭಿವೃದ್ಧಿಗೆ ರಸ್ತೆ, ರೈಲು, ವಿಮಾನ ಸಂಪರ್ಕ ಪ್ರಮುಖವಾಗುತ್ತದೆ ಎಂದು ಹೇಳಿದರು.