ಬೆಂಗಳೂರು : ಜುಲೈ 21 ರೊಳಗೆ ಜಿಎಸ್ ಟಿ ತೆರಿಗೆ ಪಾವತಿ ಮಾಡದೇ ಇದ್ರೆ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಈ ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರ ಹಾಗೂ ತೆರಿಗೆ ಇಲಾಖೆಗೆ ವರ್ತಕರು ಮನವಿ ಮಾಡಿದ್ದು, 10 ದಿನ ಗಡುವು ನೀಡಿದ್ದಾರೆ.
ಈ ಹಿನ್ನೆಲೆ ವರ್ತಕರು ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟವನ್ನು ಮೂರು ದಿನ ಬಂದ್ ಮಾಡೋಕೆ ಮುಂದಾಗಿದ್ದಾರೆ . ಹೌದು. ಜುಲೈ 23, 24. 25 ರಂದು ರಾಜ್ಯಾದ್ಯಂತ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಬಂದ್ ಆಗಲಿದೆ.
40 ಲಕ್ಷ ರು.ಗಿಂತ ಹೆಚ್ಚಿನ ವಹಿವಾಟಿಗೆ ಜಿಎಸ್ಟಿ ತೆರಿಗೆ ನೋಟಿಸ್ ಬಂದ ಹಿನ್ನೆಲೆ ವ್ಯಾಪಾರಿಗಳು ಬೆಚ್ಚಿ ಬಿದ್ದಿದ್ದು, ಯುಪಿಐ ಮೂಲಕ ಹಣ ಸ್ವೀಕಾರಕ್ಕೆ ನಿರಾಕರಿಸುತ್ತಿದ್ದಾರೆ.ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
You Might Also Like
TAGGED:GST' ನೋಟಿಸ್ ಎಫೆಕ್ಟ್