ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್: ಪಾವತಿಗಳ ಮೇಲೆ ಶೇ. 18 ರಷ್ಟು GST..?

ನವದೆಹಲಿ: 2000 ರೂ.ಗಿಂತ ಕಡಿಮೆ ಬೆಲೆಯ ಡೆಬಿಟ್, ಕ್ರೆಡಿಟ್ ಕಾರ್ಡ್ ಪಾವತಿಗಳ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಮಂಡಳಿ ಮುಂದಾಗಿದೆ. ಇದರಿಂದಾಗಿ ಕಾರ್ಡ್ ಪಾವತಿ ದುಬಾರಿಯಾಗುವ ಸಂಭವ ಇದೆ.

54ನೇ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಕಾರ್ಡ್ ಪೇಮೆಂಟ್ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವ ಬಗ್ಗೆ ಚರ್ಚೆ ನಡೆದಿದ್ದು, ಇದನ್ನು ಫಿಟ್ಮೆಂಟ್ ಸಮಿತಿಗೆ ವಹಿಸಲಾಗಿದೆ. 2000 ರೂ.ಗಿಂತ ಕಡಿಮೆ ಮೌಲ್ಯದ ಕಾರ್ಡ್ ಪೇಮೆಂಟ್ ಗಳ ಮೇಲೆ ಪೇಮೆಂಟ್ ಅಗ್ರಿಗೇಟರ್ ಗಳು ವಿಧಿಸುವ ಶುಲ್ಕಕ್ಕೆ ತೆರಿಗೆ ವಿನಾಯಿತಿ ಇದ್ದು, ಇದನ್ನು ರದ್ದುಪಡಿಸುವ ಮೂಲಕ ತೆರಿಗೆ ಸಂಗ್ರಹ ಹೆಚ್ಚಳ ಮಾಡಲು ಜಿಎಸ್​ಟಿ ಮಂಡಳಿ ಉದ್ದೇಶಿಸಿದೆ.

ಪ್ರಸ್ತುತ ಎರಡು ಸಾವಿರ ರೂ.ಗಿಂತ ಕಡಿಮೆ ಮೌಲ್ಯದ ಕಾರ್ಡ್ ಪೇಮೆಂಟ್ ಮೇಲೆ ವಹಿವಾಟಿಗೆ ತೆರಿಗೆ ವಿನಾಯಿತಿ ಇದೆ. ಜಿಎಸ್ಟಿ ಮಂಡಳಿ ಮುಂದಿರುವ ಈ ಪ್ರಸ್ತಾವನೆ ಅನುಮೋದನೆಗೊಂಡಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾಡುವ ಪಾವತಿಗಳು ದುಬಾರಿಯಾಗುತ್ತೇವೆ.

ಪಿಒಎಸ್ ಸಾಧನಗಳು, ಸ್ಕ್ಯಾನರ್ ಮುಂತಾದ ಪಾವತಿ ವಿಧಾನಗಳ ಮೂಲಕ ಕಾರ್ಡ್ ಪಾವತಿಗೆ ಅನುವು ಮಾಡಿಕೊಡುವ ಪೇಮೆಂಟ್ ಅಗ್ರಿಗೇಟರ್ ಸಂಸ್ಥೆಗಳಿಗೆ ಅವುಗಳು ಪಡೆಯುವ ಶುಲ್ಕದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲು ಮಂಡಳಿ ಉದ್ದೇಶಿಸಿದೆ. ಪೇಮೆಂಟ್ ಅಗ್ರಿಗೇಟರ್ ಗಳು ಈ ತೆರಿಗೆ ಹೊರೆಯನ್ನು ಮಾರಾಟಗಾರರ ಮೂಲಕ ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸುತ್ತವೆ.

ಪ್ರಸ್ತುತ ಅಗ್ರಿಗೇಟರ್ ಗಳು ಪ್ರತಿ ವಹಿವಾಟಿಗೆ ಶೇಕಡ 0.5 ರಿಂದ ಶೇಕಡ 2ರವರೆಗೆ ಶುಲ್ಕ ವಿಧಿಸುತ್ತಿದ್ದು, ಈ ಶುಲ್ಕಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಯುಪಿಐ ಮೂಲಕ ಮಾಡುವ ವಹಿವಾಟಿಗೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read