ಬೆಂಗಳೂರು : ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ನಿನ್ನೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇಂದು ಕೂಡ ವೆಬ್ ಸೈಟ್ ಸರ್ವರ್ ಡೌನ್ ಆಗಿದೆ.
ರಾಜ್ಯಾದ್ಯಂತ ಗೃಹಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರು ಮುಗಿಬಿದ್ದಿದ್ದು, ನಿನ್ನೆ ಕೂಡ ಸರ್ವರ್ ಡೌನ್ ಆಗಿ ಅರ್ಜಿ ಸಲ್ಲಿಸಲು ಜನರು ಪರದಾಡಿದ್ದರು. ನಿನ್ನೆಯಿಂದ ಕೂಡ ವೆಬ್ ಸೈಟ್ ಸರ್ವರ್ ಡೌನ್ ಆಗಿದೆ. ಬೆಂಗಳೂರಿನ ಎಂಜಿ ರಸ್ತೆಯ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ವೆಬ್ ಸೈಟ್ ಸ್ಲೋ ಆಗಿದ್ದು, ಜನರು ಪರದಾಡಿದರು. ಸೇವಾ ಸಿಂಧು ಆ್ಯಪ್, ಬೆಂಗಳೂರು ಒನ್, ಬೆಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ವೆಬ್ ಸೈಟ್ ಗಳ ಸರ್ವರ್ ಡೌನ್ ಆಗಿದೆ. ಈ ಹಿನ್ನೆಲೆ ಜನರು ಅರ್ಜಿ ಸಲ್ಲಿಸಲಾಗದೇ ವಾಪಸ್ ತೆರಳುತ್ತಿದ್ದಾರೆ.
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ನಿನ್ನೆಯಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೊಬೈಲ್, ಕಂಪ್ಯೂಟರ್ ನಲ್ಲಿ( seva sindhu.karnataka.gov.in) ಕೂಡ ಅರ್ಜಿ ಸಲ್ಲಿಸಬಹುದು.
You Might Also Like
TAGGED:gruha jyoti scheme