“ಚೋಲಿ ಕೆ ಪೀಚೆ” ಹಾಡಿಗೆ ಭಾವಿ ಅಳಿಯನ ಕುಣಿತ; ಕೋಪಗೊಂಡ ಮಾವನಿಂದ ಮದುವೆಯೇ ರದ್ದು…..!

ದೆಹಲಿಯಲ್ಲಿ ಮದುವೆಯೊಂದು ಅನಿರೀಕ್ಷಿತವಾಗಿ ರದ್ದಾಗಿದ್ದು, ವರನ ಕುಣಿತವೇ ಇದಕ್ಕೆ ಕಾರಣವಾಗಿದೆ. ವರ “ಚೋಲಿ ಕೆ ಪೀಚೆ ಕ್ಯಾ ಹೈ” ಹಾಡಿಗೆ ಕುಣಿದಿದ್ದು, ವಧುವಿನ ತಂದೆಗೆ ಕೋಪ ತರಿಸಿದೆ. ಹಾಡು ಅಸಭ್ಯವಾಗಿದೆ ಎಂದು ಪರಿಗಣಿಸಿ ಅವರು ಮದುವೆಯನ್ನು ರದ್ದುಗೊಳಿಸಿದ್ದಾರೆ.

ಸ್ನೇಹಿತರ ಒತ್ತಾಯದ ಮೇರೆಗೆ ವರ ಅತಿಥಿಗಳನ್ನು ರಂಜಿಸಲು ಕುಣಿಯುತ್ತಿದ್ದು, ಆದರೆ ಆತನ ಕೃತ್ಯವು ವಧುವಿನ ಮನೆಯವರ ತೀವ್ರ ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಆತ ಊಹಿಸಿರಲಿಲ್ಲ.

ಮದುವೆಯ ಸಂಭ್ರಮ ಜೋರಾಗಿ ಸಾಗುತ್ತಿದ್ದಾಗ, ವರ ತನ್ನ ಸ್ನೇಹಿತರಿಂದ ಹುರಿದುಂಬಿಸಲ್ಪಟ್ಟಿದ್ದು, ಬಾಲಿವುಡ್ ಕ್ಲಾಸಿಕ್ “ಚೋಲಿ ಕೆ ಪೀಚೆ” ಹಾಡಿಗೆ ಕುಣಿಯಲು ಮುಂದಾಗಿದ್ದಾನೆ. ಕೆಲ ಅತಿಥಿಗಳು ಈ ದೃಶ್ಯವನ್ನು ಆನಂದಿಸಿದ್ದು, ಆದರೆ ವಧುವಿನ ತಂದೆಗೆ ಇದು ಇಷ್ಟವಾಗಿಲ್ಲ. ವರನ ಕೃತ್ಯವನ್ನು ಅವರು ಅಗೌರವವೆಂದು ಪರಿಗಣಿಸಿ ತಮ್ಮ ಸಂಪ್ರದಾಯಗಳಿಗೆ ವಿರುದ್ಧವೆಂದು ಭಾವಿಸಿದ್ದಾರೆ.

ತಮ್ಮ ಕುಟುಂಬದ ಸಂಪ್ರದಾಯ ಮತ್ತು ಮೌಲ್ಯಗಳಿಗೆ ವರನು ಅವಮಾನಿಸಿದ್ದಾನೆಂದು ಭಾವಿಸಿದ ವಧುವಿನ ತಂದೆ, ಕೋಪದಿಂದ ಮದುವೆಯನ್ನು ನಿಲ್ಲಿಸಿದ್ದಾರೆ. ವರ ತಾನು ಕೇವಲ ವಿನೋದಕ್ಕಾಗಿ ಕುಣಿದೆ ಎಂದು ಎಷ್ಟೇ ಹೇಳಿದರೂ ಅವರು ತಮ್ಮ ನಿರ್ಧಾರವನ್ನು ಬದಲಿಸಿಲ್ಲ. ಎರಡು ಕುಟುಂಬಗಳ ನಡುವಿನ ಎಲ್ಲಾ ಸಂಬಂಧವನ್ನು ಅವರು ರದ್ದುಗೊಳಿಸಿದ್ದು, ಇದರಿಂದ ವಧು ಮತ್ತು ವರ ಇಬ್ಬರೂ ಆಘಾತಕ್ಕೆ ಒಳಗಾದರು.

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಒಂದು ಕುಣಿತವು ಇಂತಹ ತೀವ್ರ ಕ್ರಮಕ್ಕೆ ಹೇಗೆ ಕಾರಣವಾಗಬಲ್ಲದು ಎಂದು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read