Viral Video | ಮದುವೆ ಮಂಟಪದಲ್ಲಿ ವರದಕ್ಷಿಣೆಗೆ ಬೇಡಿಕೆ; ವರನನ್ನು ಮರಕ್ಕೆ ಕಟ್ಟಿ ಹಾಕಿದ ಹೆಣ್ಣಿನ ಮನೆಯವರು

ಮದುವೆ ಮಂಟಪದಲ್ಲಿ ವಧುವಿನೊಂದಿಗೆ ಹಾರ ವಿನಿಮಯ ಮಾಡಿಕೊಳ್ಳುವ ಕ್ಷಣಗಳ ಮುಂಚೆ ವರದಕ್ಷಿಣೆಗೆ ಬೇಡಿಕೆ ಇಟ್ಟು ಕುಳಿತ ವರನೊಬ್ಬನಿಗೆ ಹೆಣ್ಣಿನ ಕಡೆಯವರು ಸರಿಯಾಗಿ ಶಾಸ್ತಿ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಘಡದಲ್ಲಿ ಜರುಗಿದೆ.

ವರನ ವರದಕ್ಷಿಣೆಯ ಬೇಡಿಕೆಗಳಿಂದ ಸಿಟ್ಟಿಗೆದ್ದ ವಧುವಿನ ಮನೆಯವರು ಮದುವೆ ಗಂಡನ್ನು ಮರಕ್ಕೆ ಕಟ್ಟಿ ಹಾಕಿದ್ದಲ್ಲದೇ ಆತನೊಂದಿಗೆ ಬಂದಿದ್ದ ಇತರರನ್ನು ಒತ್ತೆಯಾಗಿ ಇಟ್ಟುಕೊಂಡಿದ್ದರು. ಘಟನೆಯ ವಿಡಿಯೋ ವೈರಲ್‌ ಆಗಿದೆ.

ಈ ಕುರಿತು ದೂರು ಸ್ವೀಕರಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದು ಅಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

“ಇತರರ ಮರ್ಯಾದೆ ಹಾಗೂ ಸೂಕ್ಷ್ಮಗಳೊಂದಿಗೆ ನೀವು ಆಟವಾಡುತ್ತಿದ್ದೀರಿ……,” ಎಂದು ಬಯ್ಯುತ್ತಾ ವರನಿಗೆ ವಧುವಿನ ಕಡೆಯ ಮಂದಿ ಮರಕ್ಕೆ ಕಟ್ಟಿ ಹಾಕುತ್ತಿದ್ದರೆ, ಸುತ್ತ ಇದ್ದ ಇತರರು ಆತನನ್ನು ಸರಿಯಾಗಿ ಕಟ್ಟಿಹಾಕಬೇಕಿತ್ತು ಮೊದಲು ಎನ್ನುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

https://twitter.com/Sisodia19Rahul/status/1669268238046224388?ref_src=twsrc%5Etfw%7Ctwcamp%5Etweetembed%7Ctwterm%5E1669268238046224388%7Ctwgr%5E1dc3504d094ff9561f0f4b5af9243c28f8d004f2%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-groom-tied-to-tree-held-hostage-after-dowry-demands-during-wedding-in-pratapgarh-up

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read