ಕಾನೂನುಗಳು ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪರಿಗಣಿಸದೆ, ವಸತಿ ಕಟ್ಟಡದ ಲಿಫ್ಟ್‌ನಲ್ಲಿ ಪುರುಷರ ಗುಂಪು ನಿರ್ಲಜ್ಜವಾಗಿ ಧೂಮಪಾನ ಮಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರೇಟರ್ ನೋಯ್ಡಾ ವೆಸ್ಟ್‌ನ ಏಸ್ ಸಿಟಿ ವಸತಿ ಸಂಕೀರ್ಣದಲ್ಲಿರುವ ಲಿಫ್ಟ್‌ನ ಸಿಸಿ ಟಿವಿಯಲ್ಲಿ ಈ ಘಟನೆ ಸೆರೆಯಾಗಿದೆ.
ಭಾನುವಾರ ಬೆಳಗ್ಗೆ ನಿಖಿಲ್ ಎಂಬ ಬಳಕೆದಾರರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗ್ರೇಟರ್ ನೋಯ್ಡಾ ವೆಸ್ಟ್‌ನ ಏಸ್ ಸಿಟಿಯ ಲಿಫ್ಟ್‌ನಲ್ಲಿ ಕೆಲವು ಯುವಕರು ಮದ್ಯದ ಬಾಟಲಿಗಳು ಮತ್ತು ಸಿಗರೇಟ್ ಸೇದುತ್ತಿರುವುದನ್ನು ಇದರಲ್ಲಿ ನೋಡಬಹುದು.
ವೈರಲ್ ವೀಡಿಯೊದಲ್ಲಿ, ಏಳು ಪುರುಷರ ಕೈಯಲ್ಲಿ ಮದ್ಯದ ಬಾಟಲಿಗಳು ಇದ್ದವು. ಒಬ್ಬ ವ್ಯಕ್ತಿಯ ಕೈಯಲ್ಲಿ ಸಿಗರೇಟ್ ಇತ್ತು ಮತ್ತು ಲಿಫ್ಟ್ ಬಾಗಿಲು ಮುಚ್ಚಿದ ಕ್ಷಣ, ಲಿಫ್ಟ್ ಸಿಸಿ ಟಿವಿಯನ್ನು ನೋಡುತ್ತಾ ಧೂಮಪಾನ ಮಾಡಲು ಪ್ರಾರಂಭಿಸಿದ.
ಅವರೆಲ್ಲರೂ ಸಿಸಿಟಿವಿಯನ್ನು ನೋಡುತ್ತಿದ್ದರು. ಇದರ ವಿಡಿಯೋ ವೈರಲ್ ಆಗುತ್ತಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು 7 ಜನರಲ್ಲಿ ಒಬ್ಬರಾದ ಅಂಕುಶ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ.
Some youths were seen with liquor bottles and smoking cigarettes in the lift of Ace City, Greater noida west. pic.twitter.com/9ipUQDU69o
— Nikhil Choudhary (@NikhilCh_) March 5, 2023
सोशल मीडिया से प्राप्त सूचना कि ACE सोसाइटी की लिफ्ट में कुछ व्यक्ति CCTV कैमरे के आगे सिगरेट का धुआं फूंक कर CCTV से छेड़खानी कर रहे है। इस संबंध में थाना बिसरख पुलिस द्वारा एक व्यक्ति को गिरफ्तार कर लिया गया है, शेष की गिरफ्तारी का प्रयास किया जा रहा है। बाइट-ADCP सेंट्रल नोएडा pic.twitter.com/5p7Vf20pRm
— POLICE COMMISSIONERATE GAUTAM BUDDH NAGAR (@noidapolice) March 5, 2023
सोशल मीडिया से प्राप्त सूचना कि ACE सोसाइटी की लिफ्ट में कुछ व्यक्ति CCTV कैमरे के आगे सिगरेट का धुआं फूंक कर CCTV से छेड़खानी कर रहे है। इस संबंध में थाना बिसरख पुलिस द्वारा एक व्यक्ति को गिरफ्तार कर लिया गया है, शेष की गिरफ्तारी का प्रयास किया जा रहा है। pic.twitter.com/Mn6tY3q0OC
— POLICE COMMISSIONERATE GAUTAM BUDDH NAGAR (@noidapolice) March 5, 2023