ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ವೇತನ ಶೇ. 34 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: 2025ರ ಆರಂಭದಲ್ಲಿ ರಚಿಸಿದ ಎಂಟನೇ ಕೇಂದ್ರ ವೇತನ ಆಯೋಗ ವರದಿ ಪರಿಣಾಮ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಶೇಕಡ 30 ರಿಂದ 34 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

8ನೇ ಕೇಂದ್ರ ವೇತನ ಆಯೋಗದ ವರದಿ ಬಂದ ನಂತರ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ, ಭತ್ಯೆ, ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳ ಮೇಲೆ ದೊಡ್ಡ ಪರಿಣಾಮ ಉಂಟಾಗುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ ವಾರ್ಷಿಕ ಆದಾಯ ಶೇಕಡ 30 ರಿಂದ 34 ರಷ್ಟು ಏರಿಕೆಯಾಗಬಹುದು ಎನ್ನಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ನಿಯಮ ಇನ್ನು ಅಂತಿಮವಾಗಿಲ್ಲ. ಆಯೋಗದ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿಲ್ಲ. ಆದರೂ ವೇತನ ಹೆಚ್ಚಳ ಬಗ್ಗೆ ನೌಕರರ ವಲಯದಲ್ಲಿ ವಿವಿಧ ರೀತಿಯ ಲೆಕ್ಕಾಚಾರ ನಡೆದಿವೆ.

ಬ್ರೋಕರೇಜ್ ಸಂಸ್ಥೆ ಆಂಬೀಟ್ ಕ್ಯಾಪಿಟಲ್ ಈ ಕುರಿತಾದ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಮುಂದಿನ ವರ್ಷದ ಜನವರಿ ವೇಳೆಗೆ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರಬೇಕಿತ್ತು. ಆದರೆ, ಆಯೋಗ ರಚನೆಯಾಗಿ, ವರದಿ ಸಿದ್ದವಾಗಿ, ಸರ್ಕಾರಕ್ಕೆ ಸಲ್ಲಿಸಿ, ಶಿಫಾರಸು ಅಂಗೀಕರಿಸಿದ ನಂತರ ವೇತನ ಪರಿಷ್ಕರಣೆಯಾಗುವುದರಿಂದ ಉದ್ಯೋಗಿಗಳು ಇನ್ನಷ್ಟು ಕಾಲ ಕಾಯಬೇಕಿದೆ. 44 ಲಕ್ಷ ಕೇಂದ್ರ ಸರ್ಕಾರಿ ನೌಕರರು 68 ಲಕ್ಷ ಪಿಂಚಣಿದಾರರು ಸೇರಿ ಸುಮಾರು 1.10 ಕೋಟಿ ಜನರಿಗೆ ವೇತನ ಆಯೋಗದಿಂದ ಪ್ರಯೋಜನವಾಗಲಿದೆ. ಅವರ ಮೂಲವೇತನ, ಭತ್ಯೆ, ನಿವೃತ್ತಿ ಪ್ರಯೋಜನ ಏರಿಕೆಯಾಗಲಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಪಿಂಚಣಿಯಲ್ಲಿ ಶೇಕಡ 30 ರಿಂದ 34 ರಷ್ಟು ಏರಿಕೆಯಾಗುವುದರಿಂದ ಕೇಂದ್ರ ಸರ್ಕಾರದ ಮೇಲೆ 1.3 ರಿಂದ 1.8 ಲಕ್ಷ ಕೋಟಿ ರೂ. ನಷ್ಟು ಹೆಚ್ಚುವರಿ ಹೊರೆ ಆಗಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read