JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ‘ಪೊಲೀಸ್ ಇಲಾಖೆ’ಯಲ್ಲಿ 2032 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ.!


ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎಂಬಂತೆ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
.

ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದು, ಕೆ.ಎಸ್.ಆರ್.ಪಿ. ಸ್ಟೆ.ಆರ್ಪಿಸಿ (ಸ್ಥಳಿಯೇತರ) 1500 ಹುದ್ದೆ (ಸ್ಥಳೀಯ ವೃಂದದ) 336 ಹುದ್ದೆಗಳನ್ನು ಮತ್ತು ಬಿ.ಆರ್.ಬಿ.. ಮುನಿರಾಬಾದ್ ಘಟಕದ 166 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವರ್ಗೀಕರಣವನ್ನು ಕಳುಹಿಸುವ ಬಗ್ಗೆ. ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ, ಬೆಂಗಳೂರು ರವರ ಇ-ಮೇಲ್ ಸಂದೇಶ ಸಂಖ್ಯೆ: 02/ನೇಮಕಾತಿ-5/2024-25 ದಿನಾಂಕ 14-10-2025.
ಕೆ.ಎಸ್.ಆರ್.ಪಿ. ಸ್ಟೆ.ಆರ್ಪಿಸಿ (ಪುರುಷ ಮತ್ತು ಮಹಿಳೆ) 1,500 ಹುದ್ದೆಗಳನ್ನು ಹಾಗೂ (ಸ್ಥಳೀಯ ವೃಂದದ) 336 ಹುದ್ದೆಗಳನ್ನು ಮತ್ತು ಐ.ಆರ್.ಬಿ.. ಮುನಿರಾಬಾದ್ ಘಟಕದ 166 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ತಮ್ಮ ಕಛೇರಿಯಿಂದ ಕಳುಹಿಸಲಾದ ನೇರ ಮತ್ತು ಸಮತಳ ವರ್ಗೀಕರಣದ ವಿವರವನ್ನು ಪಕ್ಕಕ್ಕಿರಿಸಿದೆ.

ಉಲ್ಲೇಖಿತ ಇ-ಸಂದೇಶದಲ್ಲಿ ಪೊಲೀಸ್ ಪ್ರಧಾನ ಕಛೇರಿಯ ಪತ್ರ ಸಂಖ್ಯೆ: 195/ಸಿಬ್ಬಂದಿ-1/2020-21 ದಿನಾಂಕ 13-10-2025ನ್ನು ಉಲ್ಲೇಖಿಸಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಕಾನ್ಸ್ ಟೇಬಲ್ ವೃಂದಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಕುರಿತು ಕೆಲವು ಅಂಶಗಳಿಗೆ ಸರ್ಕಾರದಿಂದ ಸ್ವೀಕೃತಗೊಂಡಿರುವ ಸ್ಪಷ್ಟಿಕರಣ ಹಾಗೂ ಆದೇಶಗಳಲ್ಲಿನ ನಿರ್ದೇಶನಗಳನ್ವಯ ಸಂಬಂಧಪಟ್ಟ ಘಟಕಗಳಿಂದ ವರ್ಗೀಕರಣವನ್ನು ಪಡೆದು ಪ್ರಸ್ತಾಪಿತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು. ಕ್ರಮಕ್ಕಾಗಿ ಕೋರಲಾಗಿರುತ್ತದೆ (ಪ್ರತಿಗಳನ್ನು ಲಗತ್ತಿಸಿದೆ).

ಆದ್ದರಿಂದ, ಈಗಾಗಲೇ ತಮ್ಮ ಘಟಕಗಳಿಗೆ ಹಂಚಿಕೆ ಮಾಡಿರುವ ಹುದ್ದೆಗಳಂತೆ ಸಲ್ಲಿಸಲಾಗಿರುವ ನೇರ ಮತ್ತು ಸಮತಳ ವರ್ಗೀಕರಣವನ್ನು ಪೊಲೀಸ್ ಪ್ರಧಾನ ಕಛೇರಿಯ ಪತ್ರ ದಿನಾಂಕ 13-10-2025ರಲ್ಲಿ ನೀಡಿರುವ ನಿರ್ದೇಶನದನ್ವಯ ಮಾರ್ಪಡಿಸಿ ನೇರ ಮತ್ತು ಸಮತಳ ವರ್ಗೀಕರಣವನ್ನು (ಪ್ರಶಂಸನೀಯ ಕ್ರೀಡಾಪಟುಗಳ ವರ್ಗೀಕರಣವನ್ನು ಒಳಗೊಂಡಂತೆ) ಸರ್ಕಾರದ ಪತ್ರ ಸಂಖ್ಯೆ: ಹೆಚ್ಡಿ 149 ಪಿಪಿಎ 2025 ದಿನಾಂಕ 10-10-2025ರಲ್ಲಿ ಪ್ರತಿಯೊಂದು ನೇರ ಮೀಸಲಾತಿ ವರ್ಗದಡಿ ಶೇಕಡಾ 2% ರಷ್ಟು ಮೀಸಲಾತಿ ನಿಗದಿಪಡಿಸಿರುವಂತೆ ಮರು ಪ್ರಸ್ತಾವನೆಯನ್ನು ಈ ಕಛೇರಿಯ ಇ-ಮೇಲ್ ಐಡಿ: cn16ksrpha@ksp.gov.in ಗೆ ದಿನಾಂಕ 16-10-2025ರೊಳಗಾಗಿ ಮರು ಸಂದೇಶದಲ್ಲಿ ಕಳುಹಿಸಿಕೊಡುವಂತೆ ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read