ರೈಲಿನಲ್ಲಿ T.C ಟಿಕೆಟ್ ಕೇಳಿದ್ದಕ್ಕೆ ‘ಆಧಾರ್ ಕಾರ್ಡ್’ ತೋರಿಸಿದ ಅಜ್ಜಿ : ನೆಟ್ಟಿಗರ ಮನ ಗೆದ್ದ ವೀಡಿಯೋ |WATCH VIDEO

ದುನಿಯಾ ಡಿಜಿಟಲ್ ಡೆಸ್ಕ್ : ರೈಲಿನಲ್ಲಿ ಟಿ.ಸಿ ಟಿಕೆಟ್ ಕೇಳಿದ್ದಕ್ಕೆ ಅಜ್ಜಿ ಆಧಾರ್ ಕಾರ್ಡ್ ತೋರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಹಳ ದಿನದಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು,. ಅಜ್ಜಿಯ ಮುಗ್ದತೆಗೆ ಕರಗಿದ ನೆಟ್ಟಿಗರು, ಟಿಸಿಯ ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

KSRTC ಬಸ್ಸಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳುವ ಹಾಗೆ ರೈಲಿನಲ್ಲಿ ಕೂಡ ಅಜ್ಜಿ ಆಧಾರ್ ಕಾರ್ಡ್ ತೋರಿಸಿದ್ದಾರೆ. ಅಜ್ಜಿಯ ಮುಗ್ದತೆಗೆ ಸೋತ ಟಿ. ಸಿ ನಗುತ್ತಾ ಆಧಾರ್ ಕಾರ್ಡ್ ವಾಪಸ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತರಹವೇವಾರಿ ಕಮೆಂಟ್ ಗಳು ಬರುತ್ತಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸಿದ ಅಜ್ಜಿಗೆ ದಂಡ ಹಾಕಿ ಟಿಸಿಯೇ ಹಣ ಕಟ್ಟಿರಬಹುದು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ರೈಲಿನಲ್ಲಿ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತೋರಿಸಿದ ಅಜ್ಜಿ… ಪಾಪ ಆ ಮುಗ್ದ ಮನಸ್ಸಿಗೇನು ಗೊತ್ತು ರೈಲ್ವೆ ಇಲಾಖೆಯನ್ನು ಆಳುವ ಮೋದಿ ಒಬ್ಬ ಬಡವರ ವಿರೋಧಿ ಎಂದು.. ಈ ಅಜ್ಜಿಯ ಕನಸು ನನಸಾಗಲು ನಮ್ಮ ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯ ಪ್ರಧಾನಿಯಾಗಬೇಕು ಎಂದು ಸಿಕಂದರ್ ಎಂಬುವವರು ವಿಡಿಯೋ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read