ಪದವೀಧರ ಮಹಿಳೆಯರೇ ಗಮನಿಸಿ : ಉದ್ಯಮಶೀಲತಾ ತರಬೇತಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2023-24ನೇ ಸಾಲಿಗೆ ಪರಿಶಿಷ್ಟ ಜಾತಿಯ 50 ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಉದ್ಯಮಶೀಲತಾ ತರಬೇತಿ ನೀಡಲು ಈಗಾಗಲೇ  ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಜ.31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಪ್ರತಿಷ್ಠಿತ ಸಂಸ್ಥೆಯಾದ ಬೆಂಗಳೂರಿನ ಐ.ಐ.ಎಂ ಸಂಸ್ಥೆಯ ಮೂಲಕ ಉದ್ಯಮಶೀಲತಾ ತರಬೇತಿಗಾಗಿ ಆಸಕ್ತರು  www.sw.kar.nic.in    ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿಗೆ ಅರ್ಜಿ ಸಲ್ಲಿಸುವವರು ಪರಿಶಿಷ್ಟ ಜಾತಿಗೆ ಸೇರಿದ್ದು, ಕರ್ನಾಟಕದ ನಿವಾಸಿಯಾಗಿರಬೇಕು. ಕನಿಷ್ಠ 21 ವರ್ಷಗಳು, ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. 5 ರಿಂದ 6 ತಿಂಗಳು ತರಬೇತಿಯಿದ್ದು, 8 ದಿನ ತರಬೇತಿಯನ್ನು ಐ.ಐ.ಎಂ-ಬೆಂಗಳೂರು ಸಂಸ್ಥೆಯ ಕ್ಯಾಂಪಸ್‍ನಲ್ಲಿ MOOC ಮುಖಾಂತರ ನೀಡಲಾಗುವುದು ಹಾಗೂ ಸ್ಕ್ರೀನಿಂಗ್ ಟೆಸ್ಟ್ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 ಶೇ. 100 ರಷ್ಟು ಹಾಜರಾತಿ ಕಡ್ಡಾಯವಾಗಿದ್ದು, ಫೆಬ್ರವರಿ 11 ರಂದು ಬೆಂಗಳೂರಿನ ಐ.ಐ.ಎಂ ಕ್ಯಾಂಪಸ್‍ನಲ್ಲಿ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read