ಸಹೋದರನ ವಿರುದ್ದ ಆತ್ಮಚರಿತ್ರೆಯಲ್ಲಿ ಸ್ಪೋಟಕ ಆರೋಪ ಮಾಡಿದ ಪ್ರಿನ್ಸ್ ವಿಲಿಯಂ

ಬ್ರಿಟಿಷ್ ರಾಜ ಮನೆತನದ ದಾಯಾದಿಗಳ ಜಗಳ ಬೀದಿಗೆ ಬಿದ್ದಿದೆ. 2019 ರಲ್ಲಿ ಲಂಡನ್‌ನಲ್ಲಿ ನಡೆದ ಮುಖಾಮುಖಿಯ ಸಮಯದಲ್ಲಿ ಪ್ರಿನ್ಸ್ ವಿಲಿಯಂ ನನ್ನನ್ನು ನೆಲಕ್ಕೆ ಕೆಡವಿದ್ದ ಎಂದು ಹ್ಯಾರಿ ತಮ್ಮ ಹೊಸ ಆತ್ಮಚರಿತ್ರೆ ಸ್ಪೇರ್‌ನಲ್ಲಿ ಬರೆದುಕೊಂಡಿದ್ದಾರೆ.

2019 ರಲ್ಲಿ ತನ್ನ ಲಂಡನ್ ಮನೆಯಲ್ಲಿ ನಡೆದ ಘರ್ಷಣೆಯನ್ನು ವಿವರಿಸುತ್ತಾ ಪ್ರಿನ್ಸ್ ವಿಲಿಯಂ, ಮೇಘನ್ ಅವರನ್ನು “ಅಸಭ್ಯ” ಎಂತೆಲ್ಲಾ ಕರೆದಿದ್ದರು ಎಂದು ಹ್ಯಾರಿ ಹೇಳಿಕೊಂಡಿದ್ದರು.

ವಿಲಿಯಂ “ನನ್ನ ಕಾಲರ್‌ ಹಿಡಿದು, ನನ್ನ ಹಾರವನ್ನು ಕಿತ್ತು ನನ್ನನ್ನು ನೆಲಕ್ಕೆ ಕೆಡವಿದ್ದ”ಎಂದು ಹ್ಯಾರಿ ಸ್ಪೇರ್ ನಲ್ಲಿ ಬರೆದಿದ್ದಾರೆ.

ಹ್ಯಾರಿ ಅವರ ಆತ್ಮಕಥೆ ಸ್ಪೇರ್‌ ಮುಂದಿನ ವಾರ ವಿಶ್ವದಾದ್ಯಂತ ಪ್ರಕಟವಾಗಲಿದೆ ಮತ್ತು ಬ್ರಿಟಿಷ್ ರಾಜಮನೆತನಕ್ಕೆ ಗಂಭೀರ ಕೋಪವನ್ನು ಉಂಟುಮಾಡುವ ಸಾಧ್ಯತೆಯಿದೆ.

ಪುಸ್ತಕದ ಬಿಡುಗಡೆಗೂ ಮುನ್ನ ಭಾರೀ ಮೊತ್ತಕ್ಕೆ ʼಗಾರ್ಡಿಯನ್ʼ ಪ್ರತಿಯನ್ನು ಪಡೆದುಕೊಂಡಿದ್ದು ಕೆಲ ಅಂಶಗಳನ್ನು ಬಯಲು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read