ನವದೆಹಲಿ: ಮತದಾರರ ಪಟ್ಟಿಗೆ ಜನ್ಮ ದಿನಾಂಕ, ಮರಣ ದಿನಾಂಕ ದತ್ತಾಂಶ ಜೋಡಣೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜನಗಣತಿ ಆಯುಕ್ತರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಜನ್ಮ ದಿನಾಂಕ ಮತ್ತು ಮರಣ ದಿನಾಂಕ ದತ್ತಾಂಶ ಲಿಂಕ್ ಮಾಡುವ ಪ್ರಕ್ರಿಯೆ ನಡೆದಿದ್ದು, ಈ ಸಂಬಂಧ ಶೀಘ್ರವೇ ಮಸೂದೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿಗೆ ಜನ್ಮದಿನ ದತ್ತಾಂಶ ಜೋಡಿಸಿದಾಗ ವ್ಯಕ್ತಿಗೆ 18 ವರ್ಷವಾದಾಗ ತನ್ನಿಂದ ತಾನೇ ಆತನ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಅದೇ ರೀತಿ ವ್ಯಕ್ತಿ ನಿಧನರಾದ ಸಂದರ್ಭದಲ್ಲಿ ಆತನ ಮರಣ ಪ್ರಮಾಣ ಪತ್ರ ಸಿದ್ಧವಾದಾಗ ಚುನಾವಣೆ ಆಯೋಗಕ್ಕೆ ಮಾಹಿತಿ ಲಭ್ಯವಾಗಿ ತನ್ನಿಂದ ತಾನೇ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.