ಪಿಪಿಐ-ಯುಪಿಐ ವಿನಿಮಯ ಶುಲ್ಕದಿಂದ 5,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ

ಪ್ರೀಪೇಯ್ಡ್‌ ಪಾವತಿ ಉಪಕರಣಗಳ ಆಧರಿತ ಯುಪಿಐ ವ್ಯವಹಾರಗಳ ಮೂಲಕ ಮಾಡಲಾಗುವ ಆನ್ಲೈನ್ ಹಣ ಪಾವತಿ ಮೇಲೆ 0.3%ನಷ್ಟು ಶುಲ್ಕ ವಿಧಿಸುವ ಮೂಲಕ 2023-24ರ ವಿತ್ತೀಯ ವರ್ಷದಲ್ಲಿ 5,000 ಕೋಟಿ ರೂ.ಗಳ ಆದಾಯ ಸಂಗ್ರಹಣೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಮೊಬೈಲ್ ವ್ಯಾಲೆಟ್‌ಗಳ (ಪಿಪಿಐ) ಮೂಲಕ ಯುಪಿಐ ಪಾವತಿ ಮಾಡುವ ವೇಳೆ ವಿನಿಮಯ ಶುಲ್ಕ ವಿಧಿಸುವ ಸಂಬಂಧ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಇಡುತ್ತಿರುವ ಹೆಜ್ಜೆಗಳ ವಿಶ್ಲೇಷಣೆ ಮಾಡಿರುವ ಬಾಂಬೆ ಐಐಟಿ ಈ ಸಲಹೆಗಳನ್ನು ನೀಡಿದೆ.

ಏಪ್ರಿಲ್ 1, 2023ರಿಂದ ಯುಪಿಐ ಮೂಲಕ ವರ್ತಕರಿಗೆ ಪಾವತಿ ಮಾಡಲು ಪಿಪಿಐಗಳನ್ನು ಬಳಸುವ ಗ್ರಾಹಕರಿಗೆ 1.1%ನಷ್ಟು ವಿನಿಮಯ ಶುಲ್ಕ ಹೇರಲಾಗಿದೆ. ಪಿಪಿಐ ಆಧರಿತ ಯುಪಿಐ ವರ್ತಕರ ವಹಿವಾಟುಗಳ ಮೇಲೆ ಇದು ಅನ್ವಯವಾಗಲಿದೆ.

ಈ ವಿನಿಮಯ ಶುಲ್ಕವನ್ನು ವರ್ತಕರ ಮೇಲೆ ಹೇರುವ ಮೂಲಕ ಪಿಪಿಐ ಚಂದಾದಾರರ ಮೇಲೆ ಹೇರುವುದರ ಪರವಾಗಿ ಅಧ್ಯಯನದ ವಿವರಣೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read