ಬೆಲೆ ಏರಿಕೆ ಹೊತ್ತಲ್ಲೇ ಸರ್ಕಾರದಿಂದ ಗುಡ್ ನ್ಯೂಸ್: ಬೆಲೆ ಏರಿಕೆಗೆ ಬ್ರೇಕ್ ಹಾಕಲು 15 ವರ್ಷಗಳಲ್ಲಿ ಮೊದಲ ಬಾರಿಗೆ ಗೋಧಿ ದಾಸ್ತಾನಿಗೆ ಮಿತಿ

ನವದೆಹಲಿ: ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಮಾರ್ಚ್ 2024 ರವರೆಗೆ ಗೋಧಿಯ ಮೇಲೆ ದಾಸ್ತಾನು ಮಿತಿ ವಿಧಿಸಿದೆ.

15 ವರ್ಷಗಳಲ್ಲಿ ಮೊದಲ ಬಾರಿಗೆ ಏರುತ್ತಿರುವ ಪ್ರಮುಖ ಸರಕುಗಳ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಸೋಮವಾರ ಮಾರ್ಚ್ 2024 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿಯ ಮೇಲೆ ದಾಸ್ತಾನು ಮಿತಿ ವಿಧಿಸಿತು.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ(ಒಎಂಎಸ್‌ಎಸ್) ಅಡಿಯಲ್ಲಿ ಮೊದಲ ಹಂತದಲ್ಲಿ ಕೇಂದ್ರ ಪೂಲ್‌ನಿಂದ ಬೃಹತ್ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ 15 ಲಕ್ಷ ಟನ್ ಗೋಧಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಕಳೆದ ತಿಂಗಳಲ್ಲಿ ಗೋಧಿ ಬೆಲೆಯಲ್ಲಿ ಏರಿಕೆಯಾಗಿದೆ. ಮಂಡಿ ಮಟ್ಟದಲ್ಲಿ ಸುಮಾರು 8 ಪ್ರತಿಶತದಷ್ಟು ಏರಿಕೆಯಾಗಿದೆ. ಸಗಟು ಮತ್ತು ಚಿಲ್ಲರೆ ಬೆಲೆಗಳು ಹೆಚ್ಚು ಏರಿಕೆಯಾಗದಿದ್ದರೂ, ಸರ್ಕಾರವು ಗೋಧಿಯ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವ್ಯಾಪಾರಿಗಳಿಗೆ ದಾಸ್ತಾನು ಮಿತಿ

ಮಾರ್ಚ್ 31, 2024 ರವರೆಗೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿಯ ಚಿಲ್ಲರೆ ವ್ಯಾಪಾರಿಗಳು ಮತ್ತು ಪ್ರೊಸೆಸರ್‌ಗಳ ಮೇಲೆ ಸ್ಟಾಕ್ ಮಿತಿ ವಿಧಿಸಲಾಗಿದೆ.

ಗೋಧಿ ರಫ್ತಿನ ಮೇಲಿನ ನಿಷೇಧ ಮುಂದುವರಿಕೆ

ದೇಶದಲ್ಲಿ ಸಾಕಷ್ಟು ಗೋಧಿ ದಾಸ್ತಾನು ಇದೆ. ರೈತರು ಮತ್ತು ವ್ಯಾಪಾರಿಗಳು ದಾಸ್ತಾನು ಹೊಂದಿದ್ದಾರೆ ಮತ್ತು ದಾಸ್ತಾನು ಹೊಂದಿರುವ ಅಂಶಗಳೂ ಇವೆ. ದೇಶದಲ್ಲಿ ಸಾಕಷ್ಟು ದಾಸ್ತಾನು ಲಭ್ಯವಾಗುವಂತೆ ನಾವು ಆಮದು ಮಾಡಿಕೊಳ್ಳಲು ನೋಡುತ್ತಿಲ್ಲ ಎಂದು ಸಂಜೀವ್ ಚೋಪ್ರಾ ಹೇಳಿದ್ದಾರೆ.

ಗೋಧಿಯ ಜೊತೆಗೆ, ಒಎಂಎಸ್‌ಎಸ್ ಅಡಿಯಲ್ಲಿ ಅಕ್ಕಿಯನ್ನು ಆಫ್‌ಲೋಡ್ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಮಾಣವನ್ನು ನಂತರ ಅಂತಿಮಗೊಳಿಸಲಾಗುವುದು. ಇನ್ನು ಮುಂದೆ ಸಕ್ಕರೆ ರಫ್ತಿಗೆ ಅವಕಾಶ ನೀಡುವ ಪ್ರಸ್ತಾವನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read