ಸರ್ಕಾರದಿಂದ ಮಹತ್ವದ ಕ್ರಮ: ಅಕ್ಕಿ, ನುಚ್ಚು ರಫ್ತು ನಿಷೇಧ ಬಳಿಕ ಬಾಸ್ಮತಿ ಅಕ್ಕಿಗೂ ನಿರ್ಬಂಧ

ನವದೆಹಲಿ: ಅಕ್ಕಿ, ನುಚ್ಚು ರಫ್ತು ನಿಷೇಧಿಸಿದ ಸರ್ಕಾರ ಕುಚಲಕ್ಕಿ ರಫ್ತಿಗೆ ಸುಂಕ ವಿಧಿಸಿದೆ. ಇದರ ಬೆನ್ನಲ್ಲೇ ಬಾಸ್ಮತಿ ಅಕ್ಕಿ ರಫ್ತಿನ ಮೇಲೆಯೂ ನಿರ್ಬಂಧ ವಿಧಿಸಲಾಗಿದೆ. ಈ ಮೂಲಕ ಎಲ್ಲಾ ಬಗೆಯ ಅಕ್ಕಿ ರಫ್ತು ಮೇಲೆಯೂ ಸರ್ಕಾರ ನಿರ್ಬಂಧ ಹೇರಿದಂತಾಗಿದೆ.

ಬಾಸ್ಮತಿ ಅಕ್ಕಿ ಹೆಸರಿನಲ್ಲಿ ಬಾಸ್ಮತಿ ಅಲ್ಲದ ಅಕ್ಕಿಯನ್ನು ಅಕ್ರಮವಾಗಿ ರಫ್ತು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಟನ್ ಗೆ 1200 ಅಮೆರಿಕನ್ ಡಾಲರ್ ಗಿಂತ ಕಡಿಮೆ ಬೆಲೆಯ ಬಾಸ್ಮತಿ ಅಕ್ಕಿಯ ರಫ್ತಿಗೆ ಅವಕಾಶ ನೀಡದಿರಲು ವಾಣಿಜ್ಯ ಮತ್ತು ಸಚಿವಾಲಯ ನಿರ್ಧಾರ ಕೈಗೊಂಡಿದೆ.

ಕೃಷಿ ಹಾಗೂ ಸಂಸ್ಕರಿತ ಆಹಾರ ರಫ್ತು ಉತ್ತೇಜನ ಪ್ರಾಧಿಕಾರಕ್ಕೆ ಈ ಕುರಿತಾಗಿ ನಿರ್ದೇಶನ ನೀಡಲಾಗಿದೆ. ಪ್ರತಿ ಟನ್  ಗೆ 1,200 ಡಾಲರ್ ಗಿಂತಲೂ ಕಡಿಮೆ ಬೆಲೆಗೆ ಬಾಸ್ಮತಿ ಅಕ್ಕಿ ರಫ್ತು ಮಾಡಲು ಅವಕಾಶ ನೀಡದಿರಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರೀಮಿಯಂ ಬಾಸ್ಮತಿ ಅಕ್ಕಿ ಬದಲಿಗೆ ಬಾಸ್ಮತಿ ಅಲ್ಲದ ಅಕ್ಕಿಯನ್ನು ಅಕ್ರಮವಾಗಿ ರಫ್ತು ಮಾಡುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read