300 ಯೂನಿಟ್ ಉಚಿತ ವಿದ್ಯುತ್, 15 ಸಾವಿರ ರೂ. ಆದಾಯದ ‘ಪಿಎಂ ಸೂರ್ಯ’ ಯೋಜನೆಗೆ 75,021 ಕೋಟಿ ರೂ.ಗೆ ಅನುದಾನ

ನವದೆಹಲಿ: ಮೇಲ್ಛಾವಣಿ ಸೌರ ಸ್ಥಾವರಗಳ ಮೂಲಕ ಉಚಿತ ವಿದ್ಯುತ್ ಗಾಗಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.

PM-Surya Ghar: Muft Bijli Yojana ಅಡಿ ಒಂದು ಕೋಟಿ ಕುಟುಂಬಗಳಲ್ಲಿ ಒಟ್ಟು 75,021 ಕೋಟಿ ರೂಪಾಯಿಗಳಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಸಲು ಅನುಮೋದಿಸಿದೆ.

ನವದೆಹಲಿಯಲ್ಲಿ ಗುರುವಾರ ನಡೆದ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಒಂದು ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ ಮತ್ತು ಫಲಾನುಭವಿಗಳು ಈ ಮೂಲಕ 15,000 ರೂಪಾಯಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13 ರಂದು ಯೋಜನೆಗೆ ಚಾಲನೆ ನೀಡಿದ್ದರು ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read