ಖಾತೆಗೆ ಹಣ ಪಡೆಯುತ್ತಿದ್ದ 3 ಕೋಟಿ ಫಲಾನುಭವಿಗಳಿಗೆ ಶಾಕ್: ಇ –ಕೆವೈಸಿ ಬಳಿಕ ಕಿಸಾನ್ ಸಮ್ಮಾನ್ ಫಲಾನುಭವಿ ರೈತರ ಸಂಖ್ಯೆ ಇಳಿಕೆ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ಕೋಟಿ 12 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ ಎಂದು ಸರ್ಕಾರ ಹೇಳಿದೆ.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ರೈತರನ್ನು ಯೋಜನೆಗೆ ಸೇರಿಸಲು ರೈತರ ಮುಖ ಗುರುತಿಸುವಿಕೆ ಮತ್ತು ಆಧಾರ್ ಗುರುತಿಸುವಿಕೆ ಆಧಾರಿತ ಇ -ಕೆವೈಸಿಯಂತಹ ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದೆ ಎಂದು ಸರ್ಕಾರ ಇಂದು ಹೇಳಿದೆ.

ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ, 2019 ರಲ್ಲಿ ಪ್ರಧಾನಿಯವರು ಯೋಜನೆಯನ್ನು ಪ್ರಾರಂಭಿಸಿದಾಗ ಸುಮಾರು 11 ಕೋಟಿ ಫಲಾನುಭವಿಗಳು ತಮ್ಮ ಖಾತೆಗಳಿಗೆ ಹಣವನ್ನು ಸ್ವೀಕರಿಸಿದ್ದಾರೆ. ಇ-ಕೆವೈಸಿ ಹಾಗೂ ಇತರೆ ಪ್ರಮಾಣ ಪತ್ರಗಳ ಪರಿಶೀಲನೆ ಬಳಿಕ ಫಲಾನುಭವಿಗಳ ಸಂಖ್ಯೆ 8 ಕೋಟಿ 12 ಲಕ್ಷಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read