ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಕ್ರಾಂತಿಕಾರಿ ನಿಯಮ: ನಕಲಿ ನೋಂದಣಿ ರದ್ದುಪಡಿಸಲು ಸಬ್ ರಿಜಿಸ್ಟ್ರಾರ್ ಗೆ ಅಧಿಕಾರ

ಬೆಂಗಳೂರು: ಆಸ್ತಿಗಳ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮಾಡಿದ ನೋಂದಣಿಯನ್ನು ನ್ಯಾಯಾಲಯದ ಮೆಟ್ಟಿಲು ಹತ್ತದೆ ಜಿಲ್ಲಾ ನೋಂದಣಾಧಿಕಾರಿಗಳೇ ರದ್ದುಪಡಿಸುವ ಕ್ರಾಂತಿಕಾರಿ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಅಕ್ರಮ ನೋಂದಣಿ ತಡೆ ಮತ್ತು ಅಂತಹ ಪ್ರಕರಣಗಳಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಶೀಘ್ರ ಪರಿಹಾರ ಕಲ್ಪಿಸಿ ಅಕ್ರಮ ನೋಂದಣಿಗಳನ್ನು ತಕ್ಷಣ ರದ್ದುಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ನೋಂದಣಿ ತಿದ್ದುಪಡಿ ಕಾಯ್ದೆಗೆ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದೆ. ರಾಷ್ಟ್ರಪತಿಗಳ ಅಂಕಿತ ದೊರೆತ ತಕ್ಷಣ ಕಾನೂನು ಜಾರಿಯಾಗಲಿದೆ.

ಈ ಕಾನೂನು ಜಾರಿಯಾದಲ್ಲಿ ನಕಲಿ ನೋಂದಣಿ, ನಕಲಿ ದಾಖಲೆ ಸೃಷ್ಟಿಸಿ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಿ ಅಮಾಯಕರ ಆಸ್ತಿಗಳನ್ನು ದೋಚುವುದಕ್ಕೆ ತಡೆ ಬೀಳಲಿದೆ. ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆಯಿಂದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಶಾಸಕರ ಆಸ್ತಿಗಳನ್ನು ಕೂಡ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್ ಗೆ ಹೋಗಿ ಹೋಗಬೇಕಿದೆ.

ಈಗ ಕೋರ್ಟ್ ಗೆ ಹೋಗದೆ ನಕಲಿ ನೋಂದಣಿ ರದ್ದುಪಡಿಸಲು ಸಾಧ್ಯವಾಗುವಂತೆ ಸಬ್ ರಿಜಿಸ್ಟ್ರಾರ್ ಗೆ ಅಧಿಕಾರ ನೀಡಲು ನೋಂದಣಿ ಕಾಯ್ದೆಗೆ ವಿಧಾನ ಮಂಡಲದಲ್ಲಿ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಆಸ್ತಿ ನೋಂದಣಿ ಮಾಡುವುದು, ವಾರಸುದಾರರ ಹೆಸರಿನಲ್ಲಿ ನಕಲಿ ವ್ಯಕ್ತಿಯನ್ನು ತೋರಿಸಿ ಆಕ್ರಮ ನೋಂದಣಿ ಮಾಡುವುದು ಸೇರಿದಂತೆ ಅಕ್ರಮ ನೋಂದಣಿಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಇನ್ನು ಮುಂದೆ ಅಮಾಯಕರು ಅಕ್ರಮ ನೋಂದಣಿಯಾದ ಸಂದರ್ಭದಲ್ಲಿ ಕೋರ್ಟ್ ಗೆ ಅಲೆಯಬೇಕಿಲ್ಲ. ತಕ್ಷಣವೇ ಅಕ್ರಮ ನೊಂದಣಿ ರದ್ದುಪಡಿಸಲು ಸಬ್ ರಿಜಿಸ್ಟ್ರಾರ್ ಗೆ ಅಧಿಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read