ರೈತರ ಒತ್ತಾಯಕ್ಕೆ ಮಣಿದ ಸರ್ಕಾರ: ಮೆಕ್ಕೆಜೋಳ ಖರೀದಿ ಗರಿಷ್ಠ ಮಿತಿ 50 ಕ್ವಿಂಟಲ್ ಗೆ ಹೆಚ್ಚಳ ಆದೇಶ

ಬೆಂಗಳೂರು: ಪ್ರತಿಪಕ್ಷಗಳು, ರೈತರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಪ್ರತಿ ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೆಕ್ಕೆಜೋಳದ ಗರಿಷ್ಠ ಮಿತಿಯನ್ನು 20 ಕ್ವಿಂಟಲ್ ನಿಂದ 50 ಕ್ವಿಂಟಲ್ ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಎಕರೆಗೆ 12 ಕ್ವಿಂಟಲ್ ಲೆಕ್ಕದಲ್ಲಿ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಮಾತ್ರ ಖರೀದಿಸಲು ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ರೈತರು, ಪ್ರತಿಪಕ್ಷಗಳಿಂದ ಖರೀದಿ ಮಿತಿ ಹೆಚ್ಚಳಕ್ಕೆ ಒತ್ತಾಯ ಕೇಳಿ ಬಂದಿತ್ತು. ಇದಕ್ಕೆ ಮಾಡಿದ ಸರ್ಕಾರ ಪ್ರತಿ ರೈತರಿಂದ ಐವತ್ತು ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶಿಸಿದೆ.

ದಿನಾಂಕ: 02-12-2025ರಂದು ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ “ಕ್ರ.ಸಂ. (2)ರ ಷರತ್ತಿನಲ್ಲಿ “ಪ್ರತಿ ರೈತರಿಂದ ಗರಿಷ್ಟ 5.00 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400.00 ರಂತೆ ಖರೀದಿಸತಕ್ಕದ್ದು ಮತ್ತು ಡಿಸ್ಟಿಲರಿಗಳ ಸಮೀಪದ PACS ಗಳ ಮೂಲಕ ಖರೀದಿಸಲು ಆದ್ಯತೆ ನೀಡತಕ್ಕದ್ದು” ಎಂಬುದರ ಬದಲಾಗಿ “FRUITS ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ 12 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 20.00 ಕ್ವಿಂಟಾಲ್ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ ಗೆ ರೂ.2400.00 ರಂತೆ ಖರೀದಿಸತಕ್ಕದ್ದು ಮತ್ತು ಡಿಸ್ಟಿಲರಿಗಳ ಸಮೀಪದ PACS ಗಳ ಮೂಲಕ ಖರೀದಿಸಲು ಆದ್ಯತೆ ನೀಡತಕ್ಕದ್ದು” ಎಂದು ತಿಳಿಸಲಾಗಿದೆ.

ಆದರೆ, ರೈತರು ಇದಕ್ಕೆ ಸೂಕ್ತವಾಗಿ ಸ್ಪಂದಿಸದೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾರಾಟ ಖರೀದಿ ಪ್ರಮಾಣವನ್ನು 50.00 ಕ್ವಿಂಟಾಲ್‌ಗೆ ಹೆಚ್ಚಿಸುವಂತೆ ಮನವಿ ಮಾಡಿರುತ್ತಾರೆ. ಅದರಂತೆ, 50.00 ಕ್ವಿಂಟಾಲ್‌ಗೆ ಹೆಚ್ಚಿಸಿ ಸದರಿ ಆದೇಶವನ್ನು ಪರಿಷ್ಕರಿಸಿ ತಿದ್ದುಪಡಿ ಆದೇಶವನ್ನು ಹೊರಡಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read