ಬೆಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಸರ್ಕಾರ ಹೊಸ ಪಿ ಕ್ಯಾಪ್ ವಿತರಣೆ ಮಾಡಲಿದೆ. ಹೌದು ಹಳೇ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ ಹೇಳಲಿದ್ದು, ಇನ್ಮುಂದೆ ತೆಲಂಗಾಣ ಮಾದರಿ ಪಿ ಕ್ಯಾಪ್ ನ್ನು ಪೊಲೀಸರು ಧರಿಸಲಿದ್ದಾರೆ.
ವಿಧಾನಸೌಧದ ಬಾಕ್ವೆಂಟ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೆಲವು ಪೊಲೀಸರಿಗೆ ಹೊಸ ಕ್ಯಾಪ್ ವಿತರಿಸಲಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ದಿನಾಂಕ 28-10-2025 ರಂದು ಬ್ಯಾಂಕ್ರೆಟ್ ಹಾಲ್, ವಿಧಾನ ಸೌಧ, ಬೆಂಗಳೂರು ಇಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರಿಂದ ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಆದುದರಿಂದ, ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲೆಗಳಿಂದ ತಲಾ ಒಬ್ಬರು ಪಿಸಿ ಅಥವಾ ಹೆಚ್ಸಿ ಗಳನ್ನು ಸದರಿ ಕಾರ್ಯಕ್ರಮಕ್ಕೆ ನಿಯೋಜಿಸಿ, ಸದರಿಯವರು ದಿನಾಂಕ 27-10-2025 ರಂದು ಬೆಳಿಗ್ಗೆ 9.00 ಘಂಟೆಗೆ ಡಿ.ಸಿ.ಪಿ., ವಿಧಾನ ಸೌಧ ಸೆಕ್ಯೂರಿಟಿ, ಬೆಂಗಳೂರು ಇವರ ಮುಂದೆ ವಿಧಾನ ಸೌಧ, ಬ್ಯಾಂಗ್ಲೆಟ್ ಹಾಲ್ನಲ್ಲಿ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿ ಕಳುಹಿಸಲು ಸರ್ಕಾರ ಸೂಚನೆ ನೀಡಿತ್ತು.

