ನಟ ಕಿಚ್ಚ ಸುದೀಪ್ (kiccha sudeep) ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬಹಳ ಕುತೂಹಲವಿದ್ದು, ಸುದೀಪ್ 46 ನೇ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಸದ್ಯ K 46 ಎನ್ನುವ ಹೆಸರು ಮಾತ್ರ ಇದ್ದು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಿದ್ದಿಲ್ಲ.
ಸದ್ಯ, ವಿಷಯ ಅಂದರೆ ನಟ ಸುದೀಪ್ ಹೊಸ ಸಿನಿಮಾದ ಟೀಸರ್ ಜೂನ್ 27 ರಂದು ಬಿಡುಗಡೆಯಾಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದ ಪಾತ್ರವರ್ಗ , ಸಿನಿಮಾ ಕಥೆ ಏನು ಎಂಬುದರ ಬಗ್ಗೆ ಮಾಹಿತಿ ಅಂದೇ ಹೊರಬೀಳಲಿದೆ.
ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆ ಬಳಿಕ ಅವರು ಒಂದು ಬ್ರೇಕ್ ತೆಗೆದುಕೊಂಡ ಕಿಚ್ಚ ಸುದೀಪ್ ನಂತರ ಬಿಗ್ ಬಾಸ್ ರಿಯಾಲಿಟಿ ಶೋ (Bigg Boss Bigg Boss reality show reality show) ನಲ್ಲಿ ಬ್ಯುಸಿಯಾಗಿದ್ದರು. ನಂತರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಸುದೀಪ್ ಅವರ 46ನೇ ಚಿತ್ರಕ್ಕೆ ಬಾಲಿವುಡ್ (Bollywood) ನಟಿ ಸಿಮ್ರಾತ್ ಕೌರ್ (Simrat Kaur) ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
https://twitter.com/KicchaSudeep/status/1672253380276948992?ref_src=twsrc%5Etfw%7Ctwcamp%5Etweetembed%7Ctwterm%5E1672253380276948992%7Ctwgr%5E568014138f32960ed0296d5233c44b29efec7a6f%7Ctwcon%5Es1_&ref_url=https%3A%2F%2Ftv9kannada.com%2Fentertainment%2Fk46-update-here-is-the-kichcha-sudeep-next-movie-teaser-release-date-rmd-607979.html