ಬೆಂಗಳೂರು: ಮೋಟಾರು ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆಗೆ ಭಾರತ ಸರ್ಕಾರದ ಯೋಜನೆ (CTRAV) 2025ರ ಅಡಿಯಲ್ಲಿ ನೀಡುವ ರೂ. 1.5 ಲಕ್ಷ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿಯಾಗಿ (Top up) ರೂ 1 ಲಕ್ಷಗಳ ನೆರವು ಒದಗಿಸುವ ಕುರಿತ ಸರ್ಕಾರದ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಪಘಾತ ಸಂತ್ರಸ್ತರ ಯೋಜನೆಯನ್ನು ಮಾರ್ಪಡಿಸಿ ಪ್ರತಿ ಅವಘಾತ ಸಂತ್ರಸ್ತರಿಗೆ ರೂ. 1.5 ಲಕ್ಷಗಳ ವರಗಿನ ಚಿಕಿತ್ಸೆ ಒದಗಿಸುವ ಭಾರತ ಸರ್ಕಾರದ CTRAV ಯೋಜನೆ. 2025 ಕ್ಕೆ ರಾಜ್ಯ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ರೂ. 1 ಲಕ್ಷ ಟಾಪ್ ಅಪ್ ಒದಗಿಸುವ ಸಂಬಂಧ ಈ ಕೆಳಕಂಡಂತೆ ಜಾರಿಗೊಳಿಸಲು ಅನುಮೋದನೆ ನೀಡಿ ಆದೇಶಿಸಿದೆ.
ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳು ಹಾಗೂ ಮಲ್ಲಿ ಆರ್ಗನ್ ವೈಫಲ್ಯ ಅಥವಾ ಇತರ ಗಂಭೀರ ಚಿಕಿತ್ಸೆಗೆ ಒಳಪಟ್ಟವರು CTRAV ಯೋಜನೆಯ 7 ದಿನಗಳ ಚಿಕಿತ್ಸೆ ನಂತರವೂ ರಾಜ್ಯ ಪ್ಯಾಕೇಜ್ ಪ್ರಕಾರ ವಿಸ್ತ್ರತ ಚಿಕಿತ್ಸೆಗೆ ಒಳಗಾದಲ್ಲಿ ಅವರಿಗೆ ಹೆಚ್ಚುವರಿ 1 ಲಕ್ಷದ ಟಾಪ್-ಅವ ಒದಗಿಸತಕ್ಕದ್ದು.
ಆರಂಭಿಕ stabilization ನಂತರ ರೋಗಿಗೆ ನೋಂದಾಯಿತವಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ, ಆ ಆಸ್ಪತ್ರೆ NABH, NQAS ಮಾನ್ಯತೆ ಪಡೆದಿರಬೇಕು ಅಥವಾ ರಾಜ್ಯದ ನೊಂದಾವಣೆ ಮಾನದಂಡಗಳನ್ನು ಪೂರೈಸಿರಬೇಕು. ಈ ಸಂದರ್ಭದಲ್ಲಿ SAST ಪ್ಯಾಕೇಜ್ ದರಗಳಲ್ಲಿ ರೂ. 1 ಲಕ್ಷದ ಮಿತಿಗೆ ಒಳಪಟ್ಟಿರತಕ್ಕದ್ದು.
AB-Ark ನೋಂದಾಯಿತವಲ್ಲದ ಆಸ್ಪತ್ರೆಗಳಲ್ಲಿ ವೈದ್ಯಕೀಯವಾಗಿ ನ್ಯಾಯಸಮ್ಮತವಾದಲ್ಲಿ, 7 ದಿನಗಳ ನಂತರವೂ ಚಿಕಿತ್ಸೆಯನ್ನು ಮುಂದುವರಿಸಲು ಅವಕಾಶ ನೀಡುವುದು.
ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರೂ.1.5 ಲಕ್ಷವನ್ನು ಮೀರಿದ unspecified ಚಿಕಿತ್ಸಾ ವಿಧಾನಗಳಿಗೆ ವೈದ್ಯಕೀಯ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ರಾಜ್ಯದ ಸಹಾಯಧನವನ್ನು ನೀಡುವುದು.
ರಾಜ್ಯದ ಹೆಚ್ಚುವರಿ ಸಹಾಯ(ಟಾಪ್ ಅಪ್) ಜಾರಿಗೆ NHA/MORTH TMS 2.0 ಫಾರ್ಮ್ ಬಳಕೆ ಮಾಡುವ ಪ್ರಸ್ತಾಪವಿದ್ದು, ಇದರಲ್ಲಿ ತಾಂತ್ರಿಕ ಅಡಚಣೆಗಳಿದ್ದಲ್ಲಿ ABPMIAY CM’s Ark at CTRAV ๘ dechnet daay Specified Codeನ ಮೂಲಕ ಪ್ರತ್ಯೇಕ ದಾಖಲಾತಿ ಪ್ರಕ್ರಿಯೆ ಜಾರಿಗೆ ತರಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಕ್ರಮವಹಿಸುವುದು.
ಮುಂದುವರೆದು, ಅಪಘಾತ ಸಂತ್ರಸ್ತರಿಗೆ ರಾಜ್ಯದ ಹೆಚ್ಚುವರಿ ಸಹಾಯವನ್ನು ಅನುಷ್ಠಾನಗೊಳಿಸಲು NHA/MoRTH ವೇದಿಕೆಯ TMS 20 ಅನ್ನು ಬಳಸಿಕೊಳ್ಳಲು SAST ಗೆ ಅನುಮತಿ ನೀಡಲಾಗಿದೆ.
ಈ ಯೋಜನೆಯನ್ನು ಯಾವುದೇ ಹೆಚ್ಚವರಿ ಆರ್ಥಿಕ ಹೊರೆಯಿಲ್ಲದೆ ಅಸ್ತಿತ್ವದಲ್ಲಿರುವ ರಾಜ್ಯ ಬಜೆಟ್‌ನಲ್ಲಿ ಒದಗಿಸಿರುವ ಅನುದಾನದ ಮಿತಿಯೊಳಗೆ ಅನುಷ್ಠಾನಗೊಳಿಸತಕ್ಕದ್ದು
25.08.2025 ರಲ್ಲಿನ ಸಹಮತಿ ಹಾಗೂ ಸಚಿವ ಸಂಪುಟ ನಿರ್ಣಯ ಸಂಖ್ಯೆ: 711/2025 ರಲ್ಲಿ ನೀಡಿರುವ ಅನುಮೋದನ ಮೇರೆಗೆ ಹೊರಡಿಸಲಾಗಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
