GOOD NEWS : ರಾಜ್ಯದ ‘ಅತಿಥಿ ಶಿಕ್ಷಕ’ರಿಗೆ ಗುಡ್ ನ್ಯೂಸ್ : ‘ಗೌರವಧನ’ ಪಾವತಿಸಲು ಸರ್ಕಾರದಿಂದ ಅನುದಾನ ಬಿಡುಗಡೆ

ಬೆಂಗಳೂರು : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2025-26 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವರ್ಷದ ಅಂತ್ಯದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಉಲ್ಲೇಖ 2 ರ ಪತ್ರದಲ್ಲಿ ಅನುಮತಿ ನೀಡಲಾಗಿದೆ.

2025-26 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನೇಮಕವಾದ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಪಾವತಿಸಲು ಉಲ್ಲೇಖ (1) ರ ಪತ್ರದಲ್ಲಿ 2025-26 ನೇ ಸಾಲಿನ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಜೂನ್-2025 ರಿಂದ ಸೆಪ್ಟಂಬರ್-2025 ರವರೆಗೆ ರೂ. 20416.20 ಲಕ್ಷಗಳು ಸರ್ಕಾರಿ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಜೂನ್-2025 ರಿಂದ ನವೆಂಬರ್-2025 ರವರೆಗೆ ರೂ.7124.25 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಆರ್ಥಿಕ ಇಲಾಖೆಯಿಂದ ಅನುದಾನವನ್ನು ನೇರವಾಗಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಯಾಗಿದ್ದು, ಕೂಡಲೇ ತಾಲ್ಲೂಕು ಪಂಚಾಯಿತಿಯಿಂದ ಅನುದಾನವನ್ನು ಡಿಡಿಓ ಲಾಗಿನ್ ಗೆ ಅಪ್ ಲೋಡ್ ಮಾಡಿಸಿಕೊಂಡು, ವಿಳಂಬಕ್ಕೆ ಅವಕಾಶ ನೀಡದಂತೆ ನಿಯಮಾನುಸಾರ ತಾತ್ಕಾಲಿಕವಾಗಿ ನೇಮಕವಾದ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಪಾವತಿಸಲು ಕ್ರಮವಹಿಸತಕ್ಕದ್ದು, ಈ ಕುರಿತು ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ಕಾಲಕಾಲಕ್ಕೆ ಸೂಕ್ತ ಮೇಲುಸ್ತುವಾರಿ ಮಾಡುವುದರ ಜೊತೆಗೆ ಈ ಕಛೇರಿಗೆ ಅನುಪಾಲನಾ ವರದಿಯನ್ನು ಸಲ್ಲಿಸುವುದು.

ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳ ತಮ್ಮ ಡಿಎಸ್ಸಿ ಅವಧಿ ಮುಕ್ತಾಯವಾಗುವ 15 ದಿನಗಳ ಮುಂಚಿತವಾಗಿಯೇ ನವೀಕರಣಕ್ಕೆ ಅರ್ಜಿ ಸಲ್ಲಿಸಿ, ಡಿಎಸ್ಸಿ, ನವೀಕರಣವನ್ನು ಮಾಡಿಸಿಕೊಂಡು ಸಕಾಲದಲ್ಲಿ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿಸಲು ತಿಳಿಸಿದೆ.

ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ತಾಲ್ಲೂಕು ಪಂಚಾಯಿತಿ ಅಥವಾ ಅನುಷ್ಠಾನಾಧಿಕಾರಿಗಳ ಅಥವಾ ಡಿಡಿಓಗಳ ಹಂತದಲ್ಲಿ ವಿಳಂಬವಾದಲ್ಲಿ ಮತ್ತು ಇತರೆ ಕಾರಣದಿಂದ ಅನುದಾನ ವ್ಯಪಗತವಾದಲ್ಲಿ ಮತ್ತೊಮ್ಮೆ ಅನುದಾನವನ್ನು ಒದಗಿಸುವುದಿಲ್ಲವೆಂದು ಮತ್ತು ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು, ಕ್ರಮ ಜರುಗಿಸಲಾಗುವುದು.ಮುಂದುವರೆದು, ಅತಿಥಿ ಶಿಕ್ಷಕರುಗಳಿಗೆ ಅಕ್ಟೋಬರ್ ಮಾಹೆಯ ಪೂರ್ಣ ಗೌರವ ಸಂಭಾವನೆಯನ್ನು ಪಾವತಿಸಲು ನೀಡಿರುವ ಉಲ್ಲೇಖ (3) ರ ಜ್ಞಾಪನದಲ್ಲಿರುವ ಸೂಚನೆಗಳಂತೆ ಕ್ರಮವಹಿಸುವುದು ಎಂದು ಸರ್ಕಾರ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read