ದ್ವಿಚಕ್ರ ವಾಹನ ಖರೀದಿಸುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌, 20 ಸಾವಿರ ರೂಪಾಯಿ ಅಗ್ಗವಾಗಿದೆ ಈ ಎಲೆಕ್ಟ್ರಿಕ್ ಸ್ಕೂಟರ್…!

ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವವರಿಗೆ ಗುಡ್‌ ನ್ಯೂಸ್‌ ಇದೆ. ಜನಪ್ರಿಯ ಎಲೆಕ್ಟ್ರಿಕ್‌ ಸ್ಕೂಟರ್‌ ಬ್ರಾಂಡ್‌ ಎಥರ್‌ ಎನರ್ಜಿ ಬೆಲೆ ಕಡಿತವನ್ನು ಘೋಷಿಸಿದೆ. 450S ಸ್ಕೂಟರ್‌ ಮೇಲೆ ಗ್ರಾಹಕರಿಗೆ ಡಿಸ್ಕೌಂಟ್‌ ದೊರೆಯಲಿದೆ. ಸದ್ಯ ಎಥರ್‌ 450S ಬೆಂಗಳೂರಿನಲ್ಲಿ 1,09,000 ರೂಪಾಯಿಗೆ ಮತ್ತು ದೆಹಲಿಯಲ್ಲಿ 97,500 ರೂಪಾಯಿಗೆ ಲಭ್ಯವಿದೆ. ಈ ಮೊದಲು ಬೆಲೆ ಸುಮಾರು 1.3 ಲಕ್ಷ ರೂಪಾಯಿ ಇತ್ತು.

ಎಥರ್‌ ಸ್ಕೂಟರ್‌ ಬೆಲೆಯನ್ನು 20,000 ರೂಪಾಯಿ ಕಡಿತ ಮಾಡಲಾಗಿದ್ದು, ಬೆಲೆ ಪರಿಷ್ಕರಣೆಗೆ ಕಂಪನಿಯು ಯಾವುದೇ ನಿಖರವಾದ ಕಾರಣವನ್ನು ನೀಡಿಲ್ಲ. ಇತ್ತೀಚೆಗಷ್ಟೆ Ola ಕೂಡ ರಿಯಾಯಿತಿ ಘೋಷಿಸಿತ್ತು. ಇದರ ಬೆನ್ನಲ್ಲೇ ಎಥರ್‌ ಕೂಡ ಗ್ರಾಹಕರನ್ನು ಸೆಳೆಯಲು ಈ ಪ್ಲಾನ್‌ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಆಕ್ರಮಣಕಾರಿ ಬೆಳವಣಿಗೆಯ ಜರ್ನಿ ಶುರು ಮಾಡಿರುವುದಾಗಿ ಕಂಪನಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ತ್ರೈಮಾಸಿಕದಲ್ಲಿ ಕಂಪನಿ ಸರಿಸುಮಾರು 100 ಚಿಲ್ಲರೆ ಟಚ್‌ಪಾಯಿಂಟ್‌ಗಳನ್ನು ತೆರೆಯಲಿದೆ. ಈ ಮೂಲಕ ಒಟ್ಟು ಟಚ್‌ಪಾಯಿಂಟ್‌ಗಳ ಸಂಖ್ಯೆ 350ಕ್ಕೇರಲಿದೆ.

ಎಥರ್ 450S ಸ್ಕೂಟರ್‌, 2.9kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಇದು 115 ಕಿಮೀ ಓಡಬಲ್ಲದು. ಇದು 3.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿಮೀ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಮೀ. ವೆಚ್ಚವನ್ನು ಕಡಿತಗೊಳಿಸಲು ಎಥರ್ ಈ ಸ್ಕೂಟರ್‌ನಲ್ಲಿ ಟಚ್‌ಸ್ಕ್ರೀನ್ TFT ಬದಲಿಗೆ LCD ಡಿಸ್‌ಪ್ಲೇ ಅಳವಡಿಸಿದೆ. ಆದರೆ ಫೋನ್ ಕನೆಕ್ಷನ್‌ ಫೀಚರ್‌ ಲಭ್ಯವಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read