ಭಾರತೀಯ ಅಂಚೆ ಇಲಾಖೆ ಹಾಸನ ವಿಭಾಗದ ಈ ಕೆಳಗಿನ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ನಿಗದಿತ ಕಚೇರಿ ವೇಳೆಯಲ್ಲಿ ಮಾಡಲಾಗುತ್ತದೆ.
ಹಾಸನ ಪ್ರಧಾನ ಅಂಚೆ ಕಚೇರಿ, ಅರಸೀಕೆರೆ ಪ್ರಧಾನ ಅಂಚೆ ಕಚೇರಿ, ಸಕಲೇಶಪುರ ಉಪ ಅಂಚೆ ಕಚೇರಿ, ವಿದ್ಯಾನಗರ ಉಪ ಅಂಚೆ ಕಚೇರಿ, ಕೆಆರ್ ಪುರಂ ಬಡಾವಣೆ ಉಪ ಅಂಚೆ ಕಚೇರಿ, ಹೊಳೆನರಸೀಪುರ ಉಪ ಅಂಚೆ ಕಚೇರಿ, ಅರಕಲಗೂಡು ಉಪ ಅಂಚೆ ಕಚೇರಿ, ಚನ್ನರಾಯಪಟ್ಟಣ ಉಪ ಅಂಚೆ ಕಚೇರಿ, ಹಳೇಬೀಡು ಉಪ ಅಂಚೆ ಕಚೇರಿ, ಜಾವಗಲ್ ಉಪ ಅಂಚೆ ಕಚೇರಿ, ದೊಡ್ಡಮೇಟಿಕುರ್ಕೆ ಉಪ ಅಂಚೆ ಕಚೇರಿ, ಹಿರಿಸಾವೆ ಉಪ ಅಂಚೆ ಕಚೇರಿ, ನುಗ್ಗೇಹಳ್ಳಿ ಉಪ ಅಂಚೆ ಕಚೇರಿ, ಬಾಗೂರು ಉಪ ಅಂಚೆ ಕಚೇರಿ, ಶ್ರವಣಬೆಳಗೊಳ ಉಪ ಅಂಚೆ ಕಚೇರಿ, ಯಸಳೂರ್ ಉಪ ಅಂಚೆ ಕಚೇರಿ, ಮೊಸಳೆ ಹೊಸಹಳ್ಳಿ ಉಪ ಅಂಚೆ ಕಚೇರಿ, ದೊಡ್ಡಮೇಟಿಕುರ್ಕೆ ಉಪ ಅಂಚೆ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಬೆ.9 ರಿಂದ ಸಂಜೆ.05 ಗಂಟೆಯವರೆಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಹಾಸನ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
