GOOD NEWS : ‘ರಾಜ್ಯ ಸರ್ಕಾರಿ’ ನೌಕರರ ಮಕ್ಕಳಿಗೆ ಗುಡ್ ನ್ಯೂಸ್ : ಪ್ರತಿಭಾ ಪುರಸ್ಕಾರಕ್ಕೆ ಆನ್’ಲೈನ್ ಅರ್ಜಿ ಆಹ್ವಾನ.!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.

2025ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ.90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು.

ಲಿಂಕ್  : https://ksgeanews.blogspot.com

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2025

Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YouTube ಚಾನಲ್ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
ವಿದ್ಯಾರ್ಥಿಯು 2025ರ SSLC/PUC ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.
ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.
ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ.
Online ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
ವಿದ್ಯಾರ್ಥಿಯ ಪಾಸ್ಪೋರ್ಟ್ ಭಾವಚಿತ್ರ ಮತ್ತು ದೃಢೀಕೃತ ಅಂಕಪಟ್ಟಿ
ಇಲಾಖೆಯ ಸೇವಾ ದೃಢೀಕರಣ ಪತ್ರ
ಸಂಘದ ಜಿಲ್ಲಾ/ತಾಲ್ಲೂಕು/ಯೋಜನಾ ಶಾಖೆ ಅಧ್ಯಕ್ಷರು/ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ.

ಈ ಮೇಲ್ಕಂಡ ಲಗತ್ತುಗಳನ್ನು ನಿಗದಿತ JPG Formatನಲ್ಲಿ (1 MBಮೀರದಂತೆ) ಅಪ್ ಲೋಡ್ ಮಾಡುವುದು.
ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್ಗೆ ಸ್ವೀಕೃತಿ ರವಾನೆಯಾಗಲಿದೆ.
ಶೇಕಡಾವಾರು ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ: ಬೆಳಿಗ್ಗೆ 10.30 ರಿಂದ ಸಂಜೆ 6.00ವರೆಗೆ 080-22354784/83 ಸಿ.ಎಸ್. ಷಡಾಕ್ಷರಿ ಇವರನ್ನು ಸಂಪರ್ಕಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read