ದೀಪಾವಳಿ ಹಬ್ಬಕ್ಕೆ SUV ಖರೀದಿಸುವವರಿಗೆ ಗುಡ್‌ ನ್ಯೂಸ್‌, ಲಭ್ಯವಿದೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌…..!

Hyundai Kona Electric Price 2023 (Exciting Offers!), Images, Colours &  Reviews

ದೀಪಾವಳಿಯ ಸಮಯದಲ್ಲಿ ಅನೇಕರು ಕಾರು ಖರೀದಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಕಾರುಗಳ ಮೇಲೆ ಉತ್ತಮ ಕೊಡುಗೆಗಳು ಲಭ್ಯವಿರುತ್ತವೆ. ನೀವೇನಾದ್ರೂ ಎಲೆಕ್ಟ್ರಿಕ್ SUV ಖರೀದಿಸಲು ಯೋಚಿಸುತ್ತಿದ್ದರೆ ಎರಡು ಲಕ್ಷ ರೂಪಾಯಿಗಳವರೆಗೂ ರಿಯಾಯಿತಿ ಪಡೆಯಬಹುದು.

ಎಲೆಕ್ಟ್ರಿಕ್ ಎಸ್‌ಯುವಿ ಹ್ಯುಂಡೈ ಕೋನಾ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಲಾಗ್ತಿದೆ. ಹುಂಡೈ ಭಾರತದಲ್ಲಿ ಕೇವಲ ಒಂದು EV ಮಾದರಿಯನ್ನು ಹೊಂದಿದೆ, ಅದು Kona EV. ಕಂಪನಿಯು ಸೆಪ್ಟೆಂಬರ್‌ನಲ್ಲಿ ಈ ಕಾರಿನ ಮೇಲೆ 2 ಲಕ್ಷ ರೂಪಾಯಿಗಳ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.

ಸೆಪ್ಟೆಂಬರ್ 2023 ರಲ್ಲಿ ಹ್ಯುಂಡೈ ಕೋನಾ EV ಖರೀದಿಸಿದ್ರೆ  ಗ್ರಾಹಕರು 2 ಲಕ್ಷ ರೂಪಾಯಿ ಉಳಿಸಬಹುದು. ಇದು ನಗದು ರಿಯಾಯಿತಿ. ಕೋನಾ ಎಲೆಕ್ಟ್ರಿಕ್ ಬೆಲೆ 23.84 ಲಕ್ಷದಿಂದ ಪ್ರಾರಂಭವಾಗಿ 24.03 ಲಕ್ಷದವರೆಗೆ ಇದೆ.

ಹ್ಯುಂಡೈ ಕೋನಾ EV ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದರಲ್ಲಿ 39 kWh ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಇದು ಒಮ್ಮೆ ಚಾರ್ಜ್‌ ಮಾಡಿದ್ರೆ 452 ಕಿಲೋಮೀಟರ್‌ ದೂರ ಚಲಿಸಬಲ್ಲದು. ಈ SUV ಗಂಟೆಗೆ ಸೊನ್ನೆಯಿಂದ 100 ಕಿಲೋಮೀಟರ್ ವೇಗವನ್ನು ಸಾಧಿಸಲು 9.7 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್‌ನಂತಹ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

ಹ್ಯುಂಡೈ ಕೋನಾ ಇವಿ ವೈಶಿಷ್ಟ್ಯತೆ …

ಈ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಹಿಂಭಾಗದ ಎಸಿ ವೆಂಟ್‌ಗಳು, ಕ್ರೂಸ್ ಕಂಟ್ರೋಲ್, 10-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಹೀಗೆ ಹತ್ತು ಹಲವು ವಿಶೇಷತೆಗಳಿವೆ. ಆರು ಏರ್‌ಬ್ಯಾಗ್‌ಗಳು, ವಾಹನ ಸ್ಥಿರತೆ ನಿರ್ವಹಣೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲ್ಲಾ ಡಿಸ್ಕ್ ಬ್ರೇಕ್‌ಗಳು, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ರಿಯರ್ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read