ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಅಂಚೆ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ : ಅಂಚೆ ಇಲಾಖೆಯಿಂದ 2023-24ನೇ ಸಾಲಿಗೆ ಸ್ಪರ್ಶ್ ಮತ್ತು ಫಿಲಾಟೆಲಿ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಹವ್ಯಾಸಗಳ ರಾಜನೆಂದು ಕರೆಯಲ್ಪಡುವ ಅಂಚೆ ಸಂಗ್ರಹ (ಪಿಲಾಟೆಲಿ) ಅಭಿರುಚಿಯನ್ನು ಶಾಲಮಕ್ಕಳಲ್ಲಿ ಪ್ರಚಾರ ಪಡಿಸಲು ಮತ್ತು ಉತ್ತೇಜಿಸಲು ಭಾರತೀಯ ಅಂಚೆ ಇಲಾಖೆಯು ದೀನ್ ದಯಾಳ್ ಸ್ಪರ್ಶ್ (SPARSH – Scholarship for Promotion of Aptitude &Research in Stamps as Hobby) ಯೋಜನೆಯಡಿ ಅರ್ಜಿ ಆಹ್ವಾನಿಸಿದೆ.

ಮಕ್ಕಳಲ್ಲಿ ಸದಾಭಿರುಚಿಯನ್ನು ಸುಸ್ಥಿರಗೊಳಿಸಲು ಮತ್ತು ಪಠ್ಯಕ್ಕೆ ಪೂರಕವಾದ ಜ್ಞಾನಾರ್ಜನೆ ಮಾಡಲು ಫಿಲಾಟೆಲಿ ಉತ್ತಮ ವೇಧಿಕೆಯನ್ನು ಒದಗಿಸುತ್ತದೆ. ಈ ಯೋಜನೆಯ ಲಾಭಪಡೆಯಲು ವಿದ್ಯಾರ್ಥಿಯು 6ನೇ ತರಗತಿಯಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ್ಲ ಶೇ.60 ಅಂಕಗಳಿಸಿರಬೇಕು. ಜೊತೆಗೆ ತನ್ನ ಹೆಸರಿನಲ್ಲಿ ಅಂಚೆ ಚೀಟಿ ಸಂಗ್ರಹ ಖಾತೆಯನ್ನು ಹೊಂದಿರಬೇಕು ಇಲ್ಲವೇ ಶಾಲಾ ಫಿಲಾಟೆಲಿ ಕ್ಲಬ್‍ನ ಸದಸ್ಯನಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗೆ ವಾರ್ಷಿಕ ರೂ.6000 ವಿಧ್ಯಾರ್ಥಿವೇತನ ನೀಡಲಾಗುವುದು.

ರಸಪ್ರಶ್ನೆ ಸ್ಪರ್ಧೆ ಮತ್ತು ಫಿಲಟೆಲಿ ಪ್ರಾಜೆಕ್ಟ್‍ನ ಆಧಾರದಲ್ಲಿ ಫಲಾನುಭವಿಯನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ಕೊನೆ ದಿನ ಸೆ.15 ಆಗಿದೆ.ಹೆಚ್ಚಿನ ಮಾಹಿತಿಗಾಗಿ ನಾಗರಾಜ್ ರಾವ್ ಅವರ ಮೊ. 8660295657 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷಕವರ ಕಚೇರಿಯ ಅಂಚೆ ಅಧೀಕ್ಷಕ ವಿ.ಎಲ್.ಚಿತಕೋಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read