ಮಡಿಕೇರಿ: ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟ 13 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಮತ್ತು 32 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ www.anganwadirecruit.kar.nic.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಗುರುತಿಸಲು ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್ಎಸ್ಎಲ್ಸಿ ಉತ್ತೀರ್ಣರಾದ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಕಂದಾಯ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಆಯ್ಕೆಗೆ ಸಾಮಾನ್ಯ ಅರ್ಹತೆಗಳು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 19 ವರ್ಷ ಪೂರ್ಣಗೊಂಡಿರಬೇಕು. 35 ವರ್ಷದೊಳಗಿರಬೇಕು. ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 45 ವರ್ಷ ವಯೋಮಿತಿಯೊಳಗಿರಬೇಕು.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳು: ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾ.ಪಂ.ನ ಕಟ್ಟೆಮಾಡು-2 (ಇತರೆ), ಮಕ್ಕಂದೂರು ಗ್ರಾ.ಪಂ.ನ ಮಕ್ಕಂದೂರು-1(ಎಸ್ಸಿ), ಕಡಗದಾಳು ಗ್ರಾ.ಪಂ.ನ ಕತ್ತಲೆಕಾಡು (ಇತರೆ), ಕುಂದಚೇರಿ ಗ್ರಾ.ಪಂ.ನ ಸಿಂಗತ್ತೂರು(ಇತರೆ), ಭಾಗಮಂಡಲ ಗ್ರಾ.ಪಂ. ತಲಕಾವೇರಿ(ಇತರೆ), ಕುಂಜಿಲ ಕಕ್ಕಬೆ ಗ್ರಾ.ಪಂ. ಪರಂಬುಬಾಣೆ-2(ಇತರೆ), ಕೆರೆತಟ್ಟು(ಎಸ್ಸಿ), ಅಯ್ಯಂಗೇರಿ ಗ್ರಾ.ಪಂ.ಸಣ್ಣಪುಲಿಕೋಟು(ಇತರೆ), ಬೇಂಗೂರು ಗ್ರಾ.ಪಂ. ಕೊಟ್ಟೂರು (ಇತರೆ), ಮದೆ ಗ್ರಾ.ಪಂ. ಬೆಟ್ಟತ್ತೂರು (ಇತರೆ), ಪೆರಾಜೆ ಗ್ರಾ.ಪಂ.ನ ಅಮೆಚೂರು(ಇತರೆ), ಬೇಂಗೂರು ಗ್ರಾ.ಪಂ. ಪಾಕ(ಇತರೆ), ಹಾಕತ್ತೂರು ಗ್ರಾ.ಪಂ.ನ ತೊಂಭತ್ತುಮನೆ(ಇತರೆ).
ಸಹಾಯಕಿ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳು: ಮಡಿಕೇರಿ ತಾಲ್ಲೂಕಿನ ವಾರ್ಡ್ ನಂ.10ರ ಪೆನ್ಷನ್ ಲೈನ್(ಇತರೆ), ವಾರ್ಡ್ ನಂ.13 ಸ್ಟೋನ್ ಹಿಲ್(ಇತರೆ), ವಾರ್ಡ್ ನಂ.22-23 ಗದ್ದಿಗೆ(ಇತರೆ), ವಾರ್ಡ್ ನಂ.23 ಸಂಪಿಗೆಕಟ್ಟೆ(ಇತರೆ), ವಾರ್ಡ್ ನಂ.15 ಮಂಗಳಾದೇವಿ ನಗರ(ಇತರೆ), ವಾರ್ಡ್ ನಂ,7 ಕಾನ್ವೆಂಟ್ ಜಂಕ್ಷನ್(ಇತರೆ), ಮರಗೋಡಿನ ಕಟ್ಟೆಮಾಡು-2(ಇತರೆ), ಮರಗೋಡು(ಇತರೆ), ಗಾಳಿಬೀಡುವಿನ ವಣಚಲು(ಇತರೆ), ಹೊದ್ದೂರು ಗ್ರಾ.ಪಂ. ಪಾಲೇಮಾಡು (ಎಸ್ಸಿ), ಮೂರ್ನಾಡು ಗ್ರಾ,ಪಂ. ಎಂ.ಬಾಡ-1(ಎಸ್ಸಿ), ಮಕ್ಕಂದೂರು ಗ್ರಾ.ಪಂ. ಮಕ್ಕಂದೂರು-1(ಎಸ್ಸಿ), ಹೊಸ್ಕೇರಿ ಗ್ರಾ.ಪಂ. ಅರೆಕಾಡು-2(ಎಸ್ಸಿ), ಕೆ.ನಿಡುಗಣೆ ಗ್ರಾ,ಪಂ. ಚಂದ್ರಗಿರಿ(ಇತರೆ), ಮೇಕೇರಿಯ ಸುಭಾಷ್ ನಗರ ಮೇಕೇರಿ(ಇತರೆ), ಕರಿಕೆಯ ಮಂಡೆಸ್ಥಾನ(ಎಸ್ಟಿ), ನವೋದಯ(ಇತರೆ), ದೊಡ್ಡಚೆರಿ(ಇತರೆ), ಕೊಚ್ಚಿ-1(ಇತರೆ), ಕುಂಜಿಲ ಕಕ್ಕಬೆ ಗ್ರಾ.ಪಂ.ನ ಯವಕಪಾಡಿ(ಇತರೆ), ಕೊಣಂಗೇರಿಯ ಬಲಮುರಿ-2(ಇತರೆ), ಪಾರಾಣೆ(ಇತರೆ), ಬೆಟ್ಟಗೇರಿಯ ಕಾರುಗುಂದ-1(ಇತರೆ), ಬೇಂಗೂರು ಗ್ರಾ.ಪಂ. ಐವತ್ತೋಕ್ಲು(ಇತರೆ), ಪಾಕ(ಇತರೆ), ಬೇಂಗೂರು ಎಸ್ಸಿ. ಕಾಲೋನಿ(ಇತರೆ), ಎಮ್ಮೆಮಾಡು ಗ್ರಾ.ಪಂ. ಬೈರಾಂಡಾಣೆ(ಇತರೆ), ಪೆರಾಜೆಯ ಕುಂಡಾಂಡು ಗಿರಿಜನ ಕಾಲೋನಿ(ಎಸ್ಟಿ), ಮದೆ ಗ್ರಾ.ಪಂ. ಕೂರಣಬಾಣೆ(ಇತರೆ), ದೇವರಕೊಲ್ಲಿ(ಇತರೆ), ಅಯ್ಯಂಗೇರಿಯ ಅಯ್ಯಂಗೇರಿ-1 (ಇತರೆ) ಹಾಗೂ ಬಲ್ಲಮಾವಟಿಯ ನೆಲಜಿ(ಇತರೆ)
ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜೂನ್, 09 ರೊಳಗೆ ಅಥವಾ ಮುಂಚಿತವಾಗಿ www.anganwadirecruit.kar.nic.in ನಲ್ಲಿ ಆನ್ಲೈನ್ ಮುಖಾಂತರ ಸಲ್ಲಿಸಲು ಸೂಚಿಸಿದೆ. ನಿಗಧಿತ ಅವಧಿಯ ನಂತರ ಬಂದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಅಪೂರ್ಣ ಮಾಹಿತಿಯನ್ನೊಳಗೊಂಡ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಮಡಿಕೇರಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.
ಆನ್ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು: ಅರ್ಜಿ ನಿಗದಿತ ನಮೂನೆಯಲ್ಲಿ(ಆನ್ಲೈನ್), ಜನನ ಪ್ರಮಾಣ ಪತ್ರ/ ಜನ್ಮ ದಿನಾಂಕವಿರುವ ಎಸ್ಎಸ್ಎಲ್ಸಿ ಅಂಕಪಟ್ಟಿ, ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ, ತಹಶೀಲ್ದಾರರು, ಉಪ ತಹಶೀಲ್ದಾರರಿಂದ ಪಡೆದ ಮೂರು ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ, ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ(ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ), ಅಂಗವಿಕಲತೆ ಪ್ರಮಾಣ ಪತ್ರ(ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ). ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿಗಳಿಂದ ಪಡೆದ ಪ್ರಮಾಣ ಪತ್ರ, ಇಲಾಖಾ ಸುಧಾರಣಾ ಸಂಸ್ಥೆ/ ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಕನಿಷ್ಠ 3 ವರ್ಷ ಸಂಸ್ಥೆಯಲ್ಲಿರಬೇಕು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರವರಿಂದ ಪಡೆದ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ, ಎಲ್ಲಾ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿ ಸಲ್ಲಿಸುವುದು.
ಅಭ್ಯರ್ಥಿಗಳು ಸಲ್ಲಿಸಲಾದ ಅಗತ್ಯ ದಾಖಲಾತಿಗಳಾದ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ದೃಢೀಕರಣ ಪತ್ರಗಳು ಹಾಗೂ ಇತರೆ ದಾಖಲಾತಿಗಳು ಕ್ರಮಬದ್ಧವಾಗಿದ್ದಲ್ಲಿ ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಹಾಗೂ ಬೋನಸ್ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯನ್ನು ನಿಯಮಾನುಸಾರ ನಿರ್ಧರಿಸಲಾಗುವುದು ಮತ್ತು ಯಾವುದೇ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ.
ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ಅನುಗುಣವಾಗಿ ಬದಲಾವಣೆ/ ಮಾರ್ಪಡಿಗೆ ಒಳಪಟ್ಟಿರುತ್ತದೆ. ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತದೆ. ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹೆಯಾನ ರೂ.11 ಸಾವಿರ ಗೌರವಧನ ಪಾವತಿಸಲಾಗುವುದು. ಸಹಾಯಕಿಯರಿಗೆ ರೂ.6 ಸಾವಿರ ಗೌರವಧನ ಪಾವತಿಸಲಾಗುವುದು ಎಂದು ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.