ನವದೆಹಲಿ: ಶ್ರಾವಣದಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿದ್ದು, ದೇಶದ ಚಿನಿವಾರ ಪೇಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ.
ಶೇಕಡ 99.9 ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ 1,400 ರೂ. ಇಳಿಕೆಯಾಗಿ 99,620 ರೂ.ಗೆ ಮಾರಾಟವಾಗಿದೆ. ಶೇಕಡ 99.5 ರಷ್ಟು ಪರಿಶುದ್ಧತೆಯ ಆಭರಣ ಚಿನ್ನದ ದರ 1200 ರೂಪಾಯಿ ಇಳಿಕೆಯಾಗಿದ್ದು, 99,250 ರೂ.ಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿ ದರ ಕೆಜಿಗೆ 3 ಸಾವಿರ ರೂಪಾಯಿ ಕಡಿಮೆಯಾಗಿದ್ದು, 1.15 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದೆ.