ಕುರಿ ಸಾಕಾಣಿಕೆದಾರರಿಗೆ ಗುಡ್ ನ್ಯೂಸ್ : ಸಂಚಾರಿ ಟೆಂಟ್-ಪರಿಕರ ಕಿಟ್ ವಿತರಣೆ ಯೋಜನೆಗೆ ಅರ್ಜಿ ಆಹ್ವಾನ

ಬಳ್ಳಾರಿ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 2022-23 ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ 5 ಫಲಾನುಭವಿಗಳಿಗೆ ಹಾಗೂ ಸಂಚಾರಿ ಕುರಿ-ಮೇಕೆ ಸಾಕಾಣಿಕೆದಾರರಿಗೆ ಸಂಚಾರಿ ಟೆಂಟ್ ಮತ್ತು ಪರಿಕರ ಕಿಟ್‍ಗಳನ್ನು ಒದಗಿಸಲು ಸಾಮಾನ್ಯ ಕುರಿ-ಮೇಕೆ ಸಾಕಾಣಿಕೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಿಗೆ ಆದ್ಯತೆ ಮೇಲೆ ನೀಡಲಾಗುವುದು. ಸಂಘಗಳು ಇಲ್ಲದೇ ಇರುವ ತಾಲ್ಲೂಕುಗಳಲ್ಲಿ ಕುರಿ ಸಾಕಾಣಿಕೆದಾರರುಗಳನ್ನು ಫಲಾನುಭವಿಗಳನ್ನಾಗಿ ಪರಿಗಣಿಸಲಾಗುವುದು.

ಬೇಕಾದ ದಾಖಲೆಗಳು: ನಿಗದಿತ ನಮೂನೆಯಲ್ಲಿ ಭಾವ ಚಿತ್ರದೊಂದಿಗೆ ಅರ್ಜಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಕುರಿಗಾರರ ಪಾಸ್ ಪುಸ್ತಕದ ದೃಢೀಕರಣ ಪ್ರತಿ, ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರಾಗಿರುವ ಬಗ್ಗೆ ನೋಂದಣಿ ಪತ್ರದ ದೃಢೀಕೃತ ಪ್ರತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣದ ಪತ್ರದ ದೃಢೀಕೃತ ಪ್ರತಿ ಸಲ್ಲಿಸಬೇಕು.

ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕು ಪಶು ಆಸ್ಪತೆಗಳಲ್ಲಿ ಅಥವಾ ಈ ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಜುಲೈ 21 ರೊಳಗಾಗಿ ತಾಲ್ಲೂಕಿನ ಸಹಾಯಕ ನಿರ್ದೇಶಕರಿಗೆ ಅಥವಾ ನೇರವಾಗಿ ಈ ಕಚೇರಿಗೆ ಸಲ್ಲಿಸಬೇಕು ಎಂದು ಬಳ್ಳಾರಿ ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read