ಅನ್ನ ಸುವಿಧಾ ಯೋಜನೆಯು ರಾಜ್ಯಾದ್ಯಂತ ನ. 01 ರಿಂದ ಅನುಷ್ಠಾನಗೊಳ್ಳಲಿದ್ದು, 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನ ಸುವಿಧಾ ಮಾಡ್ಯೂಲ್‌ನ ಮೂಲಕ ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ಪಡಿತರವನ್ನು ವಿತರಣೆ ಮಾಡಲಾಗುವುದು.
ಈ ಸಂಬಂಧ ಪ್ರತಿ ಮಾಹೆಯ ದಿನಾಂಕ 30 ಅಥವಾ 31 ನೇ ತಾರೀಖಿನಂದು ಗುರುತಿಸಲಾದ ಫಲಾನುಭವಿಗಳಿಗೆ SMS ಗಳನ್ನು ಕಳುಹಿಸಲಾಗುವುದು. ಅರ್ಹ ಫಲಾನುಭವಿಗಳು ಆಯಾ ತಿಂಗಳ ದಿನಾಂಕ 1 ರಿಂದ 5 ನೇ ತಾರೀಖಿನೊಳಗೆ ಅವರ ನ್ಯಾಯಬೆಲೆ ಅಂಗಡಿಯಲ್ಲಿ ಮನೆಯ ಬಾಗಿಲಿಗೆ ಪಡಿತರವನ್ನು ಪಡೆಯಲು ನೋಂದಾಯಿಸಿಕೊಳ್ಳತಕ್ಕದ್ದು.
ನೋಂದಾಯಿತ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಆಯಾ ತಿಂಗಳ 6 ರಿಂದ 15ನೇ ತಾರೀಖಿನೊಳಗಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪೂರೈಸಲಾಗುವುದು. ಅರ್ಹ ಫಲಾನುಭವಿಗಳು ಸದರಿ ಅನ್ನ ಸುವಿಧಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
