ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಮತ್ತೊಂದು `ಯೋಜನೆ’ ಚಾಲನೆಗೆ ಸಿದ್ಧತೆ

ಬೆಂಗಳೂರು : ರಾಜ್ಯ ಸರ್ಕಾರವು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ  ಮಾಡಿದ್ದು, ಇದೀಗ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ.

ಹೌದು, ನರೇಗೌ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಮಕ್ಕಳಿಗೆ ಈ ಕೂಸಿನ ಮನೆ ಆಶ್ರಯ ನೀಡಲಿದ್ದು, ಗಾಂಧಿ ಜಯಂತಿ ದಿನವಾದ ನಾಳೆ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ.

ಪ್ರಸಕ್ತ 2023-24ರ ಅಯವ್ಯಯ ಭಾಷಣದಲ್ಲಿನ ಘೋಷಣೆಯಂತೆ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು “ಕೂಸಿನ ಮನೆ” ಶಿಶುವಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. “ಕೂಸಿನ ಮನೆ’ ಕೆಂದ್ರಗಳು ಸ್ಥಳೀಯ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ದಿನದಲ್ಲಿ 6 ಗಂಟೆ 30 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತವೆ. ಗ್ರಾಮ ಪಂಚಾಯಿತಿಗಳೇ ಕೇಂದ್ರದ ಕಾರ್ಯನಿರ್ವಹಿಸುವ ಸಮಯವನ್ನು ನಿರ್ಧರಿಸಲಿದೆ.

4000 ಶಿಶು ಪಾಲನಾ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ 10 ಜನ ಕೇರ್ ಟೇಕರ್ಸ್ಗಳನ್ನು (ಮಕ್ಕಳ ಆರೈಕೆದಾರರು) ಇರಲಿದ್ದಾರೆ. ಇವರಿಗೆ ಮೊಬೈಲ್ ಕ್ರಶ್ ದೆಹಲಿ ಸಂಸ್ಥೆಯ ಸಹಕಾರದಿಂದ ತರಬೇತಿ ನೀಡಲಾಗುವುದು. ಇದರಿಂದ 40,000 ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಕ್ಕಳ ಆರೈಕೆಯ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಪ್ರತಿ ‘ಕೂಸಿನ ಮನೆ’ ಕೇಂದ್ರದಲ್ಲಿ ನರೇಗಾ ಕ್ರಿಯಾಶೀಲ ಉದ್ಯೋಗ ಹಾರ್ಡ್ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಗರಿಷ್ಠ 25 ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಅವಕಾಶ ಇರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read