ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಮುಂದಿನ ಶೈಕ್ಷಣಿಕ ವರ್ಷದಿಂದ 1000 ‘KPŚ ಶಾಲೆ ಆರಂಭಕ್ಕೆ ಸಿದ್ಧತೆ

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮುಂದಿನ ವರ್ಷ 1000 ಕೆಪಿಎಸ್‌ ಶಾಲೆ ಆರಂಭಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಪತಿ ಮಗುವೂ ಶಾಲೆಯಲ್ಲಿರಬೇಕು ಮತ್ತು ಚೆನ್ನಾಗಿ ಕಲಿಯಬೇಕು” ಎಂಬ ನೀತಿಯನ್ನಯ ಅಸ್ತಿತ್ವದಲ್ಲಿರುವ ಶಾಲೆಗಳ ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಪೂರ್ವ ಪ್ರಾಥಮಿಕ ಶಾಲೆಯಿಂದ 12 ನೇ ತರಗತಿವರೆಗೆ ಗುಣಾತ್ಮಕ ಶಿಕ್ಷಣ ನೀಡುವ ಸಲುವಾಗಿ 2018-19ನೇ ಸಾಲಿನಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ.ಈ ಶಾಲೆಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಬೋಧನಾ ಪದ್ಧತಿಯನ್ನು ಅಳವಡಿಸಲಾಗಿದೆ.

ಈ ಶಾಲೆಗಳನ್ನು ಗುಣಮಟ್ಟದ ಶಿಕ್ಷಣ ನೀಡುವ, ವಿದ್ಯಾರ್ಥಿ ಕೇಂದ್ರಿತ, ಸಮುದಾಯ ಮುಖಿ ಮತ್ತು ಸಮುದಾಯ ಬೆಂಬಲಿತ ಶಾಲೆಗಳನ್ನಾಗಿಸಿ ‘ಉತ್ಕೃಷ್ಟತೆಯ ಕೇಂದ್ರಗಳನ್ನಾಗಿ’ (Centre of Excellence) ಪರಿವರ್ತಿಸುವ ಉದ್ದೇಶವಿರುತ್ತದೆ.

ರಾಜ್ಯದಲ್ಲಿ ಪ್ರಸ್ತುತ 285 ಕರ್ನಾಟಕ ಪಬ್ಲಿಕ್ ಶಾಲೆಗಳು ಯಶ್ವಸಿಯಾಗಿ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ಒಂದೇ ಸೂರಿನಡಿಯಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೂ ಶಿಕ್ಷಣ ನೀಡುವ ಸಲುವಾಗಿ ಹಂತ ಹಂತವಾಗಿ ಒಟ್ಟು 1000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದಲ್ಲಿ ಈಗಾಗಲೇ ಕೆಲವು ಜಿಲ್ಲೆಗಳ ಜನಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಎಸ್ ಡಿ . ಎಂ ಸಿ ವತಿಯಿಂದ ಕೆಪಿಎಸ್ ಸ್ಥಾಪಿಸುವಂತೆ ಕೋರಿ ಪ್ರಸ್ತಾವನೆಗಳು ಬರುತ್ತಿವೆ.

55711 ‘ಈ ಹಿನ್ನೆಲೆಯಲ್ಲಿ 2024-25 ನೇ ಸಾಲಿಗೆ ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಬೇಕಾಗಿರುವ ಹಿನ್ನಲೆಯಲ್ಲಿ ಈ ಕೆಳಕಂಡ ಮಾನದಂಡಗಳನ್ನು ಹೊಂದಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿಗಣಿಸಬಹುದಾಗಿದೆ.

ಒಂದೇ ಆವರಣದಲ್ಲಿ ಹೊಂದಿಕೊಂಡಂತೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆ/ಪದವಿ ಪೂರ್ವ ಕಾಲೇಜು ಇರಬೇಕು.(ಕನಿಷ್ಟ 500 ಮಕ್ಕಳ ದಾಖಲಾತಿ ಇರಬೇಕು.

ಒಂದೇ ಆವರಣದಲ್ಲಿ ಹೊಂದಿಕೊಂಡಂತೆ ಶಾಲೆಗಳು ಇಲ್ಲದಿದ್ದಲ್ಲಿ, ಸುಮಾರು 500 ಮೀ ಅಂತರದಲ್ಲಿ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆ/ಪದವಿಪೂರ್ವ ಕಾಲೇಜು ಇರಬೇಕು. (ಕನಿಷ್ಠ 500 ಮಕ್ಕಳ ದಾಖಲಾತಿ ಇರಬೇಕು)

ಒಂದೇ ಆವರಣದಲ್ಲಿ ಹೊಂದಿಕೊಂಡಂತೆ ಶಾಲೆಗಳು ಇಲ್ಲದಿದ್ದಲ್ಲಿ ಸುಮಾರು 500 ಮೀ ಅಂತರದಲ್ಲಿ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆ ಇರಬೇಕು. (ಕನಿಷ್ಟ 500 ಮಕ್ಕಳ ದಾಖಲಾತಿ ಇರಬೇಕು)

ಮೇಲಿನ ಮಾನದಂಡಗಳು ಇರುವ ಶಾಲೆಗಳನ್ನು ಪರಿಗಣಿಸಿ, ಅಂತಹ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಈ ಜ್ಞಾಪನದಲ್ಲಿ ನೀಡಿರುವ ನಮೂನ-1 ರಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ದಿನಾಂಕ: 30.11.2023 ರೊಳಗೆ ಉಪನಿರ್ದೇಶಕರು (ಆಡಳಿತ) ಇವರ ದೃಢೀಕರಣದೊಂದಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read