ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಧಾರವಾಡ ಜಿಲ್ಲೆಯ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಗೌಂಡಿ ಕಿಟ್(3264), ಸುರಕ್ಷತಾ ಎಲೆಕ್ಟ್ರಿಷಿಯನ್(812), ಸುರಕ್ಷತಾ ವೆಲ್ಡರ್(200), ಸುರಕ್ಷತಾ ಕಾಪೇರ್ಂಟರ್(634), ಸುರಕ್ಷತಾ ಪೆಂಟರ್(802), ಸುರಕ್ಷತಾ ಪ್ಲಂಬರ್ (260) ಕಿಟ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ನವೆಂಬರ್ 15 ರೊಳಗೆ ಆಯಾ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕುಗಳಲ್ಲಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಕಾರ್ಮಿಕ ಇಲಾಖೆ ಕಚೇರಿಗಳಿಗೆ ನೇರವಾಗಿ ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮದ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸುವ ಅಥವಾ ಮದ್ಯವರ್ತಿಗಳಿಗೆ ಅರ್ಜಿ ಸಲ್ಲಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆಯಿಂದ ಕ್ರೂಢಿಕೃತವಾಗಿ ಫಲಾನುಭವಿಗಳ ಅರ್ಜಿ ಸಲ್ಲಿಕೆಯಾದರೆ ಸ್ವೀಕರಿಸುವುದಿಲ್ಲ. ಯೋಜನಾ ಫಲಾನುಭವಿಗಳೇ ನೇರವಾಗಿ ಅರ್ಜಿ ಸಲ್ಲಿಸಬೇಕು.
ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರು ನವೀಕರಣಗೊಂಡ ಗುರುತಿನ ಚೀಟಿ, ಆಧಾರ ಕಾರ್ಡ, ಈ ಹಿಂದೆ ಕಿಟ್ಗಳನ್ನು ಪಡೆಯದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ ಮತ್ತು ತಮ್ಮ ಮೋಬೈಲ್ ಸಂಖ್ಯೆಯನ್ನು ಸಲ್ಲಿಸಬೇಕು.
ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿದಾರರು, ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಅಣ್ಣಿಗೇರಿ ಬಸ್ ನಿಲ್ದಾಣ ಹತ್ತಿರ, ಅಣ್ಣಿಗೇರಿ ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ನವಲಗುಂದ ಗವಿಮಠದ ಹತ್ತಿರದ, ನವಲಗುಂದ ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಅನ್ವೇಕರ ಪ್ಲಾಟ್ ಜ್ಯೋತಿ ನಗರ, ಕಲಘಟಗಿ ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಸರ್ಕಾರಿ ಇಲಾಖೆಗಳ ಸಂಕೀರ್ಣ ಕಟ್ಟಡ ಕುಂದಗೋಳ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಇಂದಿರಾ ನಗರ, 1 ನೇ ಕ್ರಾಸ್, ಅಳ್ನಾವರ, ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಉಳವಿ ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ, ಧಾರವಾಡ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಕಾರ್ಮಿಕ ಅಧಿಕಾರಿಗಳ ಹಾಗೂ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಕಾರ್ಮಿಕ ಭವನ, ಚೈತನ್ಯ ನಗರ, ಪ್ರಿಯದರ್ಶಿನಿ ಕಾಲೋನಿ, ಹುಬ್ಬಳ್ಳಿ ಕಚೇರಿಗಳಿಗೆ ನವೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ ಹಾಗೂ ಬಂದಂತಹ ಅರ್ಜಿಗಳನ್ನು ನಿಯಮಾನುಸಾರ ಮತ್ತು ಜೇಷ್ಠತೆ ಅನುಸಾರ ಆಯ್ಕೆ ಮಾಡಿ ಕಿಟ್ಗಳನ್ನು ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಇಲಾಖೆಯ ಹುಬ್ಬಳ್ಳಿ ಸಹಾಯಕ ಕಾರ್ಮಿಕ ಆಯುಕ್ತ ಸಚಿನ್ ಹಳೆಮನಿ ಅವರು ತಿಳಿಸಿದ್ದಾರೆ.
