ಬೆಂಗಳೂರು: ಅನ್ನಭಾಗ್ಯ ಯೋಜನೆ ಪಡಿತರ ಫಲಾನುಭವಿಗಳಿಗೆ ಇಂದಿರಾ ಕಿಟ್ ನಲ್ಲಿ ಹೆಸರು ಕಾಳು ಬದಲು ಹೆಚ್ಚುವರಿಯಾಗಿ ತೊಗರಿ ಬೇಳೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ಮೊದಲು ಇಂದಿರಾ ಕಿಟ್ ನಲ್ಲಿ ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಸಕ್ಕರೆ, ಒಂದು ಕೆಜಿ ಉಪ್ಪು ನೀಡಲು ತೀರ್ಮಾನಿಸಲಾಗಿತ್ತು. ಈಗ ಹೆಸರುಕಾಳು ಬದಲಿಗೆ ಅದೇ ಮೊತ್ತದಲ್ಲಿ ತೊಗರಿ ಬೇಳೆಯನ್ನು ಹೆಚ್ಚುವರಿ ಆಗಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
TAGGED:ಇಂದಿರಾ ಕಿಟ್
