ರೈಲ್ವೆ ನೌಕರರಿಗೆ ಕೇಂದ್ರದಿಂದ ಹಬ್ಬದ ಗಿಫ್ಟ್: 78 ದಿನಗಳ ಬೋನಸ್

ನವದೆಹಲಿ: ಕೇಂದ್ರ ಸರ್ಕಾರ ನಾನ್ ಗೆಜೆಟೆಡ್ ರೈಲ್ವೆ ನೌಕರರಿಗೆ ದಸರಾ ಹಬ್ಬದ ಕೊಡುಗೆ ನೀಡಿದೆ. 78 ದಿನಗಳ ಉತ್ಪಾದನಾ ಆಧರಿತ ಬೋನಸ್ ನೀಡಲು ತೀರ್ಮಾನಿಸಲಾಗಿದೆ.

ಇದರಿಂದ 11.72 ಲಕ್ಷ ರೈಲ್ವೆ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರ ಇದಕ್ಕಾಗಿ 2029 ಕೋಟಿ ರೂ. ವೆಚ್ಚ ಮಾಡಲಿದೆ. ಚಾಲಕರು, ಗಾರ್ಡ್, ಹಳಿ ನಿರ್ವಾಹಕರು, ಸೂಪರ್ ವೈಸರ್, ತಂತ್ರಜ್ಞರು ಸೇರಿ ಮಧ್ಯಮ ಮತ್ತು ಕೆಳಸ್ತರದ ರೈಲ್ವೆ ನೌಕರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೈಲ್ವೆ ನೌಕರರಿಗೆ ಬೋನಸ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿದೆ. 11,72,240 ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ.ಗಳ ಮೊತ್ತದ ದೀಪಾವಳಿ ಬೋನಸ್ ಅನ್ನು ಮಂಜೂರು ಮಾಡಿದೆ. ಈ ಉತ್ಪಾದಕತೆ-ಸಂಯೋಜಿತ ಬೋನಸ್ 78 ದಿನಗಳ ಮೌಲ್ಯದ ವೇತನಕ್ಕೆ ಸಮನಾಗಿರುತ್ತದೆ.

ಟ್ರ್ಯಾಕ್ ನಿರ್ವಾಹಕರು, ಲೊಕೊ ಪೈಲಟ್‌ಗಳು, ರೈಲು ವ್ಯವಸ್ಥಾಪಕರು(ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಪಾಯಿಂಟ್‌ಮ್ಯಾನ್, ಸಿಬ್ಬಂದಿ ಮತ್ತು ಇತರ ಗ್ರೂಪ್ ಎಕ್ಸ್‌ ಸಿ ಸಿಬ್ಬಂದಿಯಂತಹ ವಿವಿಧ ವರ್ಗದ ರೈಲ್ವೆ ಸಿಬ್ಬಂದಿಗೆ ಮೊತ್ತವನ್ನು ಪಾವತಿಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read