ರಾಜ್ಯ ಸರ್ಕಾರದಿಂದ `PSI’ ಗಳಿಗೆ ಗುಡ್ ನ್ಯೂಸ್ : ತಾತ್ಕಾಲಿಕ ಮುಂಬಡ್ತಿಗೆ ಅನುಮತಿ

ಬೆಂಗಳೂರು : ಮುಂಬಡ್ತಿ ನಿರೀಕ್ಷೆಯಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ತಾತ್ಕಾಲಿಕ ಮುಂಬಡ್ತಿಗೆ ಪೊಲೀಸ್ ಇಲಾಖೆಗೆ ಅನುಮತಿ ನೀಡಿದೆ.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ನೇರ ನೇಮಕಾತಿ ವಿಳಂಬ ಹಿನ್ನೆಲೆಯಲ್ಲಿ ಖಾಲಿ ಇರುವ 577 ಪಿಎಸ್ ಐ ಹುದ್ದೆಗಳಿಗೆ ಸ್ವತಂತ್ರ ಪ್ರಭಾರ ವ್ಯವಸ್ಥೆಯಡಿ ತಾತ್ಕಾಲಿಕ ಮುಂಬಡ್ತಿ ನೀಡಲು ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

2020-21 ನೇ ಸಾಲಿನ 545 ಹುದ್ದೆಗಳು ಹಾಗೂ 2021-22 ನೇ ಸಾಲಿನ 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read