ಭಾರತೀಯ ಅಂಚೆ ಇಲಾಖೆಯು APT 2.0 ಎಂಬ ಹೊಸ ತಂತ್ರಾಂಶವನ್ನು ಈಗಾಗಾಲೇ ಅಳವಡಿಸಿಕೊಂಡಿದ್ದು ಗ್ರಾಹಕರು ಕೂಡ ಇಲಾಖೆಯ ಜಾಲತಾಣ ಅಥವಾ Dak Sewa ಎಂಬ App ಮೂಲಕ ಸ್ಪೀಡ್ ಪೋಸ್ಟ್ ಹಾಗೂ ಇತರೆ ಪಾರ್ಸೆಲ್‌ಗಳನ್ನು ಸ್ವಯಂ ಬುಕಿಂಗ್ ಮಾಡಿ ಸಮೀಪದ ಅಂಚೆ ಕಚೇರಿಯಲ್ಲಿ ನೀಡಬಹುದು.
ಇದರಿಂದ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನೂ ತಪ್ಪಿಸಬಹುದು ಮತ್ತು ಆನ್‌ಲೈನ್ ಪಾವತಿ ಮೂಲಕ ಅಂಚೆ ವೆಚ್ಚ ಪಾವತಿಸಬಹುದು.
ಅಂಚೆ ಇಲಾಖೆಯು ಪ್ರಸ್ತುತ ರಾಜ್ಯದ ರಾಜಧಾನಿಗಳಿಂದ ನೆರೆಯ ರಾಜ್ಯದ ರಾಜಧಾನಿಗಳಿಗೆ, ಬೃಹತ್ ನಗರಗಳಿಗೆ ಇಲಾಖೆಯ ಲಾರಿ/ ಅಂಚೆ ವಾಹನಗಳ ಮೂಲಕ ಪಾರ್ಸೆಲ್ ನೇರ ಸಾಗಾಣೆ ಪ್ರಾರಂಭಿಸಿದೆ. ಪ್ರತಿದಿನ ಬೆಂಗಳೂರಿನಿಂದ ದೆಹಲಿ, ಮುಂಬೈ, ಹೈದರಾಬಾದ್, ನಾಗ್ಪುರ, ಕೊಚ್ಚಿ, ಮಂಗಳೂರು, ಮಣಿಪಾಲ ಇನ್ನಿತರ ನಗರಗಳಿಗೆ ನೇರ ಸಾಗಾಣೆ ವ್ಯವಸ್ಥೆ ಕಲ್ಪಿಸಲಾಗಿದೆ.
ಆದ್ದರಿಂದ ಸೆ.8 ರಿಂದ ಸೆ.13 ರವರೆಗೆ ಮಹಾ ಉದ್ಯಮ ಸಪ್ತಾಹ ಎಂಬ ಶೀರ್ಷಿಕೆಯಡಿಯಲ್ಲಿ ಜಿಲ್ಲಾದ್ಯಂತ ಎಲ್ಲಾ ಅಂಚೆ ಕಚೇರಿಗಳು, ಮಾರುಕಟ್ಟೆ ಕಾರ್ಯನಿರ್ವಾಹಕ ಮತ್ತು ಪ್ರಚಾರಕರ ಮೂಲಕ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಉದ್ಯಮ ನಡೆಸುವವರು, ಆನ್ಲೈನ್ ಪಾರ್ಸೆಲ್ ಕಳುಹಿಸುವವರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448291067 ಅಥವಾ ವೆಬ್‌ಸೈಟ್ ವಿಳಾಸ https://indiapost.gov.in, https://app.indiapost.gov.in/custo mer-selfservice/home ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಲು ಹಾಸನ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.