ಬೆಂಗಳೂರಿನ ಜನತೆಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ 3,000 `ಉಚಿತ ವೈ-ಫೈ ಝೋನ್’ ಸೇವೆ ಆರಂಭ

ಬೆಂಗಳೂರು : ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಬೆಂಗಳೂರಿನಲ್ಲಿ 3,000 ಕ್ಕೂ ಹೆಚ್ಚು ಉಚಿತ ವೈ-ಫೈ ವಲಯಗಳನ್ನು ಆರಂಭಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಟೆಕ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಶೀಘ್ರವೇ 3,000 ಕ್ಕೂ ಹೆಚ್ಚು ಉಚಿತ ವೈ-ಫೈ ವಲಯಗಳನ್ನು ಹೊಂದಲಿದ್ದು, ಬಳಿಕ ಯೋಜನೆಯು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಬ್ರಾಡ್ಬ್ಯಾಂಡ್ ಪೂರೈಕೆದಾರರು ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಸಂಪರ್ಕಿಸಲು ಮತ್ತು ಚರ್ಚಿಸಲು ಚಿಂತನೆ ನಡೆಸುತ್ತಿದೆ. ಈ ಯೋಜನೆಯಡಿ ಬಳಕೆದಾರರಿಗೆ ಡೇಟಾ ಮಿತಿ 50 MB ನೀಡಲಾಗಿದೆ. ಬಳಕೆದಾರರಿಗೆ ಮೂರು ಗಂಟೆಗಳ ಉಚಿತ ಬ್ರೌಸಿಂಗ್ ಮಾಡಬಹುದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read