ಪ್ರಯಾಣಿಕರಿಗೆ ಗುಡ್ ನ್ಯೂಸ್: 40 ಕಿ.ಮೀ. ವ್ಯಾಪ್ತಿಗೆ ಬಿಎಂಟಿಸಿ ಬಸ್ ಗಳ ಸಂಚಾರ ವಿಸ್ತರಣೆ

ಬೆಂಗಳೂರು: ಬಿಎಂಟಿಸಿ ಬಸ್ ಗಳ ಸಂಚಾರ ವಿಸ್ತರಿಸಲು ಬಿಟಿಎಸ್‌ ಯೋಜನೆ ಕುರಿತು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಮೈಸೂರು ರಾಜ್ಯ ಸಾರಿಗೆ ಸಂಸ್ಥೆ (ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ)ವು ಮೋಟಾರು ವಾಹನ ಕಾಯಿದೆ, 1939 (ಕೇಂದ್ರ ಕಾಯಿದೆ ಸಂಖ್ಯೆ 4/1939)ರ ಕಲಂ 68(ಸಿ) ಅಡಿಯಲ್ಲಿ ಕೆಳಕಂಡ ಯೋಜನೆಯನ್ನು ಪ್ರಕಟಿಸಲಾಗಿರುತ್ತದೆ ಹಾಗೂ ಮೈಸೂರು ಸರ್ಕಾರ (ಪ್ರಸ್ತುತ ಕರ್ನಾಟಕ ಸರ್ಕಾರ)ವು ಸದರಿ ಕಾಯಿದೆಯ ಕಲಂ 68-ಡಿ ರ ಅಡಿಯಲ್ಲಿ, ಅಧಿಸೂಚನೆ ಸಂಖ್ಯೆ 2 202 ລ 60, 0 16-01-1961 , ಪಾಲಿಕೆ ವ್ಯಾಪ್ತಿಯಿಂದ 12 ಮೈಲಿ ಅಥವಾ 20 ಕಿ.ಮೀ. ಸುತ್ತಮುತ್ತಲಿನವರೆಗೆ ಸಾರಿಗೆ ವಾಹನಗಳನ್ನು ಸಂಚಾರ ಮಾಡಲು ಯೋಜನೆಗೆ (ಇನ್ನುಮುಂದೆ “ಬಿಟಿಎಸ್ ಯೋಜನೆ” ಕರೆಯಲಾಗುವುದು) ಅನುಮೋದನೆ ನೀಡಲಾಗಿರುತ್ತದೆ

ಮುಂದುವರೆದು ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ ಸಾರಿಇ 280 ಸಾಇಪ 2004, ದಿನಾಂಕ:31-05-2007 ರ ಮೂಲಕ ಬಿಟಿಎಸ್ ಯೋಜನೆಯನ್ನು ಪರಿಷ್ಕರಿಸಿರುತ್ತದೆ.

ತದನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಚನೆಯ ನಂತರ ಬೆಂಗಳೂರು ನಗರವು ವ್ಯಾಪಕವಾಗಿ ವಿಸ್ತಾರಗೊಂಡ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ ಸಾರಿಇ 100 ಸಾಇಪ 2013 ದಿನಾಂಕ: 30-09-2014 ರಲ್ಲಿ ಬಿಟಿಎಸ್ ಯೋಜನೆಯನ್ನು ಮಾರ್ಪಡಿಸಿ, ಕಾರ್ಯಾಚರಣೆ ವ್ಯಾಪ್ತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಿತಿಯಿಂದ 25 ಕಿ.ಮೀ.ವರೆಗೆ ವಿಸ್ತರಿಸಿರುತ್ತದೆ.

ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ: ಸಾರಿಇ 174 ಸಾಇಪ 2015 ದಿನಾಂಕ: 07-03-2019 ರಲ್ಲಿ ಇಡೀ ಕರ್ನಾಟಕ ರಾಜ್ಯಕ್ಕೆ ಸಮಗ್ರ ಪ್ರದೇಶ ಯೋಜನೆಯನ್ನು (New Comprehensive Area Scheme for the Entire State of Karnataka) ಜಾರಿಗೆ ತರಲಾಗಿರುತ್ತದೆ. ಹಾಗೂ ಅಧಿಸೂಚನೆ ಸಂಖ್ಯೆ: ಟಿಡಿ 69 ಟಿಡಿಒ 2019 ದಿನಾಂಕ: 20-07-2021 ಮತ್ತು ಅಧಿಸೂಚನೆ ಸಂಖ್ಯೆ: ಟಿಡಿ 69 ಟಿಡಿಒ 2019 ದಿನಾಂಕ: 29-03-2023 ರಲ್ಲಿ ಸದರಿ ಯೋಜನೆಗೆ ತಿದ್ದುಪಡಿ/ ಮಾರ್ಪಾಡು ಮಾಡಲಾಗಿರುತ್ತದೆ.

ಮುಂದುವರೆದು, ಬೆಂಗಳೂರು ನಗರವು ಬೃಹದಾಕಾರವಾಗಿ ಬೆಳೆದು, ಜನಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದ್ದು, ನಗರದ ಮಿತಿಯು ವಿಸ್ತಾರಗೊಂಡಿರುತ್ತದೆ. ಉಪನಗರ ಪ್ರದೇಶಗಳಲ್ಲಿ ಅನೇಕ ಪಟ್ಟಣಗಳು ಸಹ ಬೆಳೆಯುತ್ತಿದ್ದು, ಅಲ್ಲಿ ವಾಸಿಸುತ್ತಿರುವ ಜನರು ತಮ್ಮ ಉದ್ಯೋಗ ಹಾಗೂ ಇತರೆ ಅಗತ್ಯ ಕಾರ್ಯಗಳ ನಿಮಿತ್ತ ನಗರದಲ್ಲಿನ ವಿವಿಧ ಭಾಗಗಳಿಗೆ ಸಂಚರಿಸಬೇಕಾಗಿರುವುದರಿಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು ವಿಸ್ತರಿಸುವುದು ಅವಶ್ಯವೆಂದು ಕಂಡುಬಂದಿರುವುದರಿಂದ ಮೋಟಾರು ವಾಹನ ಕಾಯಿದೆ, 1988 (ಕೇಂದ್ರ ಕಾಯಿದೆ ಸಂಖ್ಯೆ 59/1988)ರ ಕಲಂ 102ರ ಉಪಕಲಂ (1) ರನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಾರಿಇ 100 2013 ໖: 30-09-2014 0 ໖ “2” ” ಸಂಬಂಧಿಸಿದಂತೆ ಕಾಲಂ 3 ರಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಲು ಉದ್ದೇಶಿಸಿದೆ.

“ಬಿಟಿಎಸ್ ಯೋಜನೆಗೆ ಸಂಬಂಧಿಸಿದ ಪ್ರದೇಶವೆಂದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿರುವ ಪ್ರದೇಶಗಳು ಹಾಗೂ ಅದರ ಗಡಿಯಿಂದ 40 ಕಿ.ಮೀ.ವರೆಗೆ ವ್ಯಾಪಿಯ ಸುತ್ತಮುತ್ತಲಿನ ಪ್ರದೇಶಗಳು”.

ಮೋಟಾರು ವಾಹನಗಳ ಕಾಯ್ದೆ, 1988 (ಕೇಂದ್ರ ಕಾಯ್ದೆ ಸಂಖ್ಯೆ 59, 1988) ರ ಸೆಕ್ಷನ್ 102ರ ಸಬ್ ಸೆಕ್ಷನ್ (1)ರಲ್ಲಿ ರಾಜ್ಯ ಸರ್ಕಾರಕ್ಕೆ ಕಲ್ಪಿಸಲಾದ ಅಧಿಕಾರದನ್ವಯ, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ಆ ಕಾಯಿದೆಯ ಕಲಂ 102ರ ಉಪಕಲಂ (2)ರ ಪ್ರಕಾರ, ರಾಜ್ಯ ಸಾರಿಗೆ ಸಂಸ್ಥೆಯಿಂದ ಹಾಗೂ ಈ ತಿದ್ದುಪಡಿಯಿಂದ ಬಾಧಿತರಾಗುವ ಯಾವುದೇ ಇತರೆ ವ್ಯಕ್ತಿಗಳಿಂದ ಆಕ್ಷೇಪಣೆಗಳು/ಸಲಹೆಗಳನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ, ಆಕ್ಷೇಪಣೆಗಳು ಹಾಗೂ ಸಲಹೆಗಳು ಏನಾದರೂ ಇದ್ದಲ್ಲಿ, ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, 3ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ರವರಿಗೆ ಸಲ್ಲಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read