ಹಳದಿ ಮಾರ್ಗದಲ್ಲಿ 6ನೇ ರೈಲು ಸೇರ್ಪಡೆಯೊಂದಿಗೆ ರೈಲುಗಳ ಮಧ್ಯಂತರ ಅವಧಿ 12 ರಿಂದ 13 ನಿಮಿಷಕ್ಕೆ ಇಳಿಕೆಯಾಗಲಿದೆ. ಪಶ್ಚಿಮ ಬಂಗಾಳದ ಟಿಟಾಗರ್ ರೈಲು ಸಿಸ್ಟಮ್ ನಿಂದ ಆರು ಬೋಗಿಗಳು ರವಾನೆಯಾಗಿದ್ದು, ಶೀಘ್ರವೇ ಹಬ್ಬಗೋಡಿ ಡಿಪೋಗೆ ಬರಲಿವೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ರೈಲು ಸೇವೆ ಲಭ್ಯವಾಗಲಿದೆ.
19.5 ಕಿಲೋಮೀಟರ್ 15 ಕಿಲೋಮೀಟರ್ ಉದ್ದದ ಆರ್.ವಿ. ರಸ್ತೆ ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನದವರೆಗೆ ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಇನ್ನು ಎರಡು ರೈಲುಗಳು ಪೂರೈಕೆಯಾಗುವ ಸಾಧ್ಯತೆಯಿದ್ದು, ಹೊಸ ಎಂಟು ರೈಲುಗಳ ಸೇರ್ಪಡೆಯ ನಂತರ 10 ನಿಮಿಷಕ್ಕೊಂದು ರೈಲು ಸಂಚಾರ ಇರಲಿದೆ ಎಂದು ಹೇಳಲಾಗಿದೆ.
