ಬೆಂಗಳೂರು : ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕನ್ನಡದಲ್ಲಿ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆ ಬರೆಯಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.
ಈ ಬಗ್ಗೆ ರೈಲ್ವೇ ಸಚಿವ ವಿ ಸೋಮಣ್ಣ ಟ್ವೀಟ್ ಮಾಡಿದ್ದು, ನನ್ನ ಸೂಚನೆಯ ಮೇರೆಗೆ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ (Promotional) ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರದಿಂದ ಪ್ರತಿಭಾವಂತ ಕನ್ನಡಿಗ ಉದ್ಯೋಗಿಗಳಿಗೆ ರೈಲ್ವೆಯಲ್ಲಿ ಮತ್ತಷ್ಟು ಹೆಚ್ಚಿನ ಅವಕಾಶಗಳು ದೊರಕಲಿವೆ ಎಂಬ ಭರವಸೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಇಲಾಖೆಗಳಲ್ಲಿ ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ನೈಋತ್ಯ ರೈಲ್ವೆಯು ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಅಧಿಸೂಚನೆ ಹೊರಡಿಸಿದೆ.
ನನ್ನ ಸೂಚನೆಯ ಮೇರೆಗೆ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ (Promotional) ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ.
ಈ ನಿರ್ಧಾರದಿಂದ ಪ್ರತಿಭಾವಂತ ಕನ್ನಡಿಗ ಉದ್ಯೋಗಿಗಳಿಗೆ ರೈಲ್ವೆಯಲ್ಲಿ ಮತ್ತಷ್ಟು ಹೆಚ್ಚಿನ ಅವಕಾಶಗಳು ದೊರಕಲಿವೆ ಎಂಬ ಭರವಸೆಯಿದೆ.
I’m pleased to inform you that South Western… pic.twitter.com/1eTsWDI1yG
— V. Somanna (@VSOMANNA_BJP) August 7, 2024