ದುನಿಯಾ ಡಿಜಿಟಲ್ ಡೆಸ್ಕ್ : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ- ಕೇರಳ ಪ್ರದೇಶ, ಭಾರತ ಸರ್ಕಾರ) ಬೆಂಗಳೂರು. ಇವರು ವಿವಿಧ ಲೋವರ್ ಡಿವಿಷನ್ ಕ್ಲರ್ಕ್ (ಎಲ್ಡಿಸಿ) ಮತ್ತು ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ “ಎ” 3131 ಹುದ್ದೆಗಳ ನೇಮಕಾತಿಗೆ ಸಂಯೋಜಿತ ಉನ್ನತ ಮಾಧ್ಯಮಿಕ ಪರೀಕ್ಷೆ (ಸಿಎಚ್ಎಸ್ಎಲ್ಇ) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಅಥವಾ ತತ್ಸಮಾನ. ನಿರ್ದಿಷ್ಟ ಹುದ್ದೆಗಳ ಅಪೇಕ್ಷಣೀಯ ಅರ್ಹತೆಯ ವಿವರಗಳಿಗೆ (ಎಸ್ಎಸ್ಸಿ) ಅಧಿಸೂಚನೆಯ ಪ್ಯಾರಾ-8 ಅನ್ನು ಪರಿಶೀಲಿಸಬಹುದು. 18 ರಿಂದ 27 ವರ್ಷದೊಳಗಿರಬೇಕು. ನಿರ್ದಿಷ್ಟ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ ಅಧಿಸೂಚನೆಯ ಪ್ಯಾರಾ-5 ಅನ್ನು ಪರಿಶೀಲಿಸಬಹುದು. ಪರೀಕ್ಷೆಯ ಸಂಭವನೀಯ ದಿನಾಂಕ ಸೆಪ್ಟೆಂಬರ್, 08 ರಿಂದ ಸೆಪ್ಟೆಂಬರ್, 18 ರವರೆಗೆ, ಶುಲ್ಕ ರೂ.100(ಎಸ್ಸಿ, ಎಸ್ಟಿ, ಮಹಿಳೆ, ದಿವ್ಯಾಂಗರು, ಮಾಜಿ ಸೈನಿಕರಿಗೆ ಶುಲ್ಕವಿಲ್ಲ). ಅರ್ಜಿ ಸಲ್ಲಿಸಲು ಜುಲೈ, 18 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ದೂ.ಸಂ.9449692691 ಮತ್ತು ವೆಬ್ಸೈಟ್ www.ssckkr.kar.nic.in ವಿಳಾಸವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.