JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಶಿಮುಲ್’ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶಿವಮೊಗ್ಗ ಇದರ ನೇಮಕಾತಿ ಪ್ರಕಟಣೆ ಸಂಖ್ಯೆ.ಶಿಮುಲ್/ಆಡಳಿತ-1/ನೇ.ನೇ-370/9359/2022-23 ರೀತ್ಯ ವಿವಿಧ ವೃಂದಗಳಲ್ಲಿ ಖಾಲಿ ಇರುವ ಒಟ್ಟು 194 ಹುದ್ದೆಗಳ ನೇರ ನೇಮಕಾತಿಗಾಗಿ ದಿನಾಂಕ: 31.01.2023 ರಂದು ನೇಮಕಾತಿ ಪ್ರಕಟಣೆ ಹೊರಡಿಸಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

ದಿನಾಂಕ: 31-01-2023 ರ ನೇಮಕಾತಿ ಪ್ರಕಟಣೆಯಲ್ಲಿ ವಿವಿಧ ವೃಂದಗಳಲ್ಲಿನ 194 ವಿವಿಧ ಹುದ್ದೆಗಳಲ್ಲಿ ನೇಮಕಾತಿ ಪ್ರಕಟಣೆಯ ಹುದ್ದೆಗಳ ಕ್ರಮ ಸಂಖ್ಯೆ: 3) ಸಹಾಯಕ ವ್ಯವಸ್ಥಾಪಕರು(ಎಫ್ ಅಂಡ್ಎಫ್)-03 ಹುದ್ದೆಗಳು, ಕ್ರಮ ಸಂಖ್ಯೆ: 13) ವಿಸ್ತರಣಾಧಿಕಾರಿ ದರ್ಜೆ-3-05 ಹುದ್ದೆಗಳು, ಕ್ರಮ ಸಂಖ್ಯೆ: 19) ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ)-04 ಹುದ್ದೆಗಳು, ಕ್ರಮ ಸಂಖ್ಯೆ: 20) ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ)-02 ಹುದ್ದೆಗಳು, ಕ್ರಮ ಸಂಖ್ಯೆ: 23) ಕಿರಿಯ ಸಿಸ್ಟಂ ಆಪರೇಟರ್-03 ಹುದ್ದೆಗಳು, ಕ್ರಮ ಸಂಖ್ಯೆ: 26) ಕಿರಿಯ ತಾಂತ್ರಿಕರು (ಎಲೆಕ್ಟಿಕಲ್)-05 ಹುದ್ದೆಗಳು, ಕ್ರಮ ಸಂಖ್ಯೆ: 28) ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಂ.ಆರ್.ಎ.ಸಿ)-02 ಹುದ್ದೆಗಳು ಹಾಗೂ ಕ್ರಮ ಸಂಖ್ಯೆ: 30) ಕಿರಿಯ ತಾಂತ್ರಿಕರು(ಬಾಯರ್ ಅಟೆಂಡೆಂಟ್)-03 ಹುದ್ದೆಗಳಿಗೆ ಕ.ಹಾ.ಮ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ /ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸೇವಾನುಭವ ಹೊಂದಿರುವವರಿಗೆ ನೇರ ನೇಮಕಾತಿಯಲ್ಲಿ ಕಲ್ಪಿಸಿರುವ ಸೇವಾ ನಿಯಮಗಳ ಅವಕಾಶವು ಕರ್ನಾಟಕ ಸಹಕಾರ ಸಂಘಗಳ ನಿಯಮ 1960 ರ ನಿಯಮ 17 ಮತ್ತು 18 ರ ಅವಕಾಶಗಳಿಗೆ ವ್ಯತಿರಿಕ್ತವಾಗುವುದರಿಂದ ತಾನಾಗಿಯೇ ರದ್ದಾಗುತ್ತದೆ ಮತ್ತು ಜಾರಿಗೊಳಿಸಲು ಬರುವುದಿಲ್ಲವೆಂದು ತಿಳಿಸಿ ಮೇಲ್ಕಂಡ ಕ್ರಮ ಸಂಖ್ಯೆಗಳ ಒಟ್ಟು 27 ಹುದ್ದೆಗಳಿಗೆ ಪರಿಷ್ಕೃತ ನೇಮಕಾತಿ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು / ಕರ್ನಾಟಕ ಸಹಕಾರ ಹಾಲು ಮಹಾಮಂಡಳ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಂದ ವಿವಿಧ ವೃಂದಗಳಲ್ಲಿ ದಿನಾಂಕ: 31.01.2023 ರ ನೇಮಕಾತಿ ಪ್ರಕಟಣೆಯ ಕ್ರ.ಸಂ 3, 13, 19, 20, 23, 26, 28 ಮತ್ತು 30 ರಲ್ಲಿನ ಒಟ್ಟು 27 ಹುದ್ದೆಗಳಿಗೆ ಕಲ್ಪಿಸಲಾಗಿದ್ದ ಅವಕಾಶಗಳನ್ನು ರದ್ದುಪಡಿಸಿ ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೊಳಿಸಿ ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ, ಬೆಂಗಳೂರು ಇವರು ದಿನಾಂಕ: 02.08.2025 ರಲ್ಲಿ ಅನುಮೋದಿಸಿರುವಂತೆ ಈ ಕೆಳಕಂಡ ಒಟ್ಟು 27 ಹುದ್ದೆಗಳಿಗೆ ನಿಯಮಾನುಸಾರ ವಿದ್ಯಾರ್ಹತೆ ನಿಗದಿಗೊಳಿಸಿ ಈ ನೇಮಕಾತಿ ತಿದ್ದುಪಡಿ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read