ರೈತ ಸಮುದಾಯಕ್ಕೆ ಗುಡ್‌ ನ್ಯೂಸ್‌ : ಹಗಲಿನ ವೇಳೆ ʻಪಂಪ್‌ ಸೆಟ್‌ʼ ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮಹತ್ವದ ಕ್ರಮ

ಬೆಂಗಳೂರು : ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಚರ್ಚೆಯ ನಂತರ, ಈ ಹಿಂದೆ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪದ್ಮತಿಯನ್ನು ಕೂಡಲೇ ಬದಲಿಸಿ, ಹೊಸದಾಗಿ ಪದ್ಮತಿಯನ್ನು ಜಾರಿಗೆ ತರಲು ಸಚಿವ ಸಂಪುಟವು ತೀರ್ಮಾನಿಸಿತು. ಅದರಂತೆ ಈ ಕೆಳಕಂಡಂತೆ ಆದೇಶಿಸಿದೆ.

ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು ವಿದ್ಯುತ್ ಜಾಲಕ ವ್ಯವಸ್ಥಿತವಾಗಿ ಸೇರ್ಪಡಗೊಳಿಸಲು ಮತ್ತು ಸೌರ ವಿದ್ಯುತ್ತನ್ನು ಸಮಪರ್ಕವಾಗಿ ಬಳಸಲು stand-alone /off grid ಸೋಲಾರ್ ಪಂಪ್‌ಸೆಟ್‌ಗಳನ್ನು ಹಾಗೂ IP set ಫೀಡರ್‌ಗಳ ಸೌರೀಕರಣವನ್ನು ಅನುಷ್ಠಾನಗೊಳಿಸಿ ರೈತರ ವಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್‌ ಸೌಕರ್ಯ ಕಲ್ಪಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ:

(1) ವಿದ್ಯುತ್ ಸರಬರಾಜು ಕಂಪನಿಗಳು 2015 ರಿಂದ ಈಚೆಗೆ IP ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಕರ್ಯ ರಚಿಸಲು ಕೈಗೊಂಡಿರುವ ಕ್ರಮಕ್ಕಾಗಿ ಘಟನೋತ್ತರ ಅನುಮೋದನೆ ನೀಡಿದೆ.

(2) ವಿದ್ಯುತ್ ಸರಬರಾಜು ಕಂಪನಿಗಳು 2015 ರಿಂದ ಈಚೆಗೆ ಬಂಡವಾಳ ವಚ್ಚದಲ್ಲಿ ಸಕ್ರಮಗೊಂಡ/ಸಾಮಾನ್ಯ ಸೆಟ್‌ಗಳಿಗೆ ವಿದ್ಯುತ್ IP ಮೂಲಸೌಕರ್ಯ ಕಲ್ಪಿಸಿರುವುದಕ್ಕೆ ಘಟನೋತ್ತರ ಅನುಮೋದನ ನೀಡಿದ.

(3) ವಿದ್ಯುತ್ ಸರಬರಾಜು ಕಂಪನಿಗಳು ಸಕ್ರಮಗೊಳಿಸಿದ ಕೃಷಿ ಪಂಪ್‌ಸೆಟ್‌ಗಳಿಗೆ 2022-23 ಮತ್ತು 2023-24 ರಲ್ಲಿ ಟೆಂಡರ್ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಟೆಂಡರ್ ಕರೆಯಲಾದ ಅಂದಾಜುಪಟ್ಟಿಯನ್ನು ಪುನರ್ ಪರಿಶೀಲಿಸಿ, ಪಂಪ್ ಸೆಟ್‌ಗಳು ಹಾಲಿ ಇರುವ ವಿದ್ಯುತ್‌ಜಾಲದಿಂದ 500 ಮೀಟಿರ್‌ಯಿಂದಾಚಯಿದ್ದಲ್ಲಿ ಕ್ರಮಸಂಖ್ಯೆ (5) ರಂತ ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು 500 ಮೀಟರ್ ಒಳಗಿರುವ ಪಂಪ್‌ಸೆಟ್‌ಗಳಿಗೆ ಕನಿಷ್ಠ ಅವಶ್ಯಕತೆಗೆ ತಕ್ಕಂತ ಅನುಷ್ಠಾನಗೊಳಿಸಲು ಕ್ರಮವಹಿಸುವುದು,

(4) ದಿನಾಂಕ 22.9.2023 ರೊಳಗೆ ನೋಂದಾಯಿಸಲ್ಪಟ್ಟ IP set ಸಂಖ್ಯೆಗಳನ್ನು ಕೂಡಲೇ ಧೃಡಪಡಿಸಿಕೊಂಡು ಕಾಮಗಾರಿಗಳನ್ನು ನಿಯಮನುಸಾರ ಕ್ರಮವಹಿಸಲು ಅನುಮೋದಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read